
ಔರಾದ ಸುದ್ದಿ.
ಸರಕಾರದ ಯೋಜನೆ ದುರುಪಯೋಗ ಖಾಸಗಿ ಜಮೀನಿಗೆ ಕೊಳವೆ ಬಾವಿ ನೀರು ? ಕಣ್ಣುತ್ತೆರೆದು ನೋಡಿ ಅಧಿಕಾರಿಗಳೆ ?

ಬೀದರ ಜಿಲ್ಲೆಯ ಔರಾದ (ಬಿ) ತಾಲೂಕಿನ ಜೋಜನಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಳಪಡುವ ಬೊರ್ಗಿ(ಜೆ) ಗ್ರಾಮದ ಸಾರ್ವಜನಿಕ ಕೊಳವೆ ಬಾವಿಯ ದುರುಪಯೋಗ ಮಾಡಿಕೊಂಡು ಸುಮಾರು ಒಂದು ವರ್ಷ ದಿಂದ ಇದೆ ರೀತಿ ನಡೆಯುತ್ತಿದೆ. ಖಾಶೆಂಪುರ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆಯ ಬದಿಯಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಸಾರ್ವಜನಿಕರ ಕುಡಿಯುವ ನೀರಿನ ಸಲುವಾಗಿ ಸುಮಾರು ಆರು ತಿಂಗಳ ಹಿಂದೆ ಕೊಳವೆ ಬಾವಿ ಕೊರೆಯಿಸಲಾಯಿತ್ತು.

ಈ ಒಂದು ಹೊಸ ಕೊಳವೆ ಬಾವಿಯ ನೀರನ್ನು ನೇರವಾಗಿ ಗ್ರಾಮದ ಜನರಿಗೆ ಸಾರ್ವಜನಿಕರಿಗೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಿಸಬೇಕು ಆದರೆ ಇಲ್ಲಿ ಈ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಸೇರಿ ಖಾಸಗಿ ಜಮೀನು ಆದ ರಾಜಪ್ಪಾ ತಂದೆ ಬಾಬುರಾವ ಕುಡ್ಲೆ ಅವರ ಜಮೀನಿಗೆ ನೀರಾವರಿ ಸಲುವಾಗಿ ನೀರು ಸರಬರಾಜು ಮಾಡುತ್ತಿದ್ದಾರೆ .ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಇದರಲ್ಲಿ ಹೆಚ್ಚು ಗಮನ ಸೆಳೆಯುವ ರೀತಿಯಲ್ಲಿ ಕಾರ್ಯ ವನ್ನು ಹೊಂದಿದೆ. ಗ್ರಾಮಕ್ಕೆ ನೀರು ಸರಬರಾಜು ಮಾಡುವುದು ಬಿಟ್ಟು ಖಾಸಗಿ ಜಮೀನಿಗೆ ನೀರಾವರಿ ಸಲುವಾಗಿ ನೀರು ಸರಬರಾಜು ಮಾಡಿದ್ದಾರೆ ಗ್ರಾಮ ಪಂಚಾಯತ್ ಅಧಿಕಾರಿಗಳು ಈ ರೀತಿ ಅಧಿಕಾರಿಗಳೆ ತಪ್ಪು ಮಾಡಿದರೆ ಸಾಮಾನ್ಯವಾಗಿ ಸಾಮಾನ್ಯ ಜನರ ಗತಿ ಹೇಗೆ ಇರುತ್ತದೆ ವಿಚಾರ ವಿನಿಮಯ ಮಾಡುವುದು ಒಂದು ಪ್ರಶ್ನೆ ?ಅಧಿಕಾರ ದರ್ಪ ತೋರಿಸುವ ಕಾರ್ಯ ಮಾಡಬೇಡಿ ಗ್ರಾಮ ಅಭಿವೃದ್ಧಿ ಯೋಜನೆ ಕಾರ್ಯ ಮಾಡಿ ಎಂದು ಗ್ರಾಮದ ಜನರ ಆಕ್ರೋಶ ವ್ಯಕ್ತಪಡಿಸಿದರು .ಇದು ಒಂದೇ ಅಲ್ಲಾ ಸುಮಾರು ಈ ರೀತಿ ಈ ತಾಲ್ಲೂಕಿನಲ್ಲಿ ಘಟನೆ ನಡೆಯುತ್ತಿವೆ.ಬೇರೆ ಬೇರೆ ಗ್ರಾಮದಲ್ಲಿ ಘಟನೆ .ಅಧಿಕಾರ ದರ್ಪ ಶಾಶ್ವತ ಇರುವುದಿಲ್ಲ ಜೀವನದಲ್ಲಿ ಜನರ ಮಧ್ಯೆ ಉಳಿದು ಗ್ರಾಮ ಅಭಿವೃದ್ಧಿ ಯೋಜನೆ ಕಡೆ ಗಮನ ಸೆಳೆಯುವ ರೀತಿಯಲ್ಲಿ ಕಾರ್ಯ ಮಾಡಿದರೆ ಒಳ್ಳೆಯ ಹೆಸರು ಇರುತ್ತದೆ ಯಾವಾಗಲೂ ಜೀವನದಲ್ಲಿ ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡಬೇಕು ಅಧಿಕಾರಿಗಳು ಯಾವಾಗಲೂ ಎಂದು ಗ್ರಾಮದ ಜನರ ನೋವು ಮಾಧ್ಯಮದವರ ಜೊತೆ ಸೇರಿ ನೋವು ಹೇಳಿದರು .


ವರದಿಗಾರರು
ರಾಹುಲ ಕ್ರಾಂತಿಕಾರಿ