
ಸರಸ್ವತಿ ವಿದ್ಯಾ ಮಂದಿರ ಶಾಲೆ ಠಾಣಾ ಕುಶನೂರ. ನವೋದಯ ಶಾಲೆಗೆ ಮೃತ್ಯುಂಜಯ ಆಯ್ಕೆ. ಶಾಲೆಯ ಸಂಬಂಧಿ ವರ್ಗದವರಿಂದ ಸನ್ಮಾನ.
ಈ ವಿದ್ಯಾರ್ಥಿ 1ನೇ ತರಗತಿಯಿಂದ 5ನೇ ತರಗತಿಯವರೆಗೆ ಸರಸ್ವತಿ ವಿದ್ಯಾ ಮಂದಿರ ಠಾಣಾ ಕುಶನೂರ ಶಾಲೆಯಲ್ಲಿ ವ್ಯಾಸಂಗ ಮಾಡುತಿದನು. ಈ ವಿದ್ಯಾರ್ಥಿ ಶಾಲೆಯಲ್ಲಿ ಎಲ್ಲರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದನು. ಎಲ್ಲಾ ವಿಷಯಗಳಲ್ಲಿ ತರಗತಿ ವಿಷಯ, ಕ್ರಿಯಾಪಟ್ಟುದಲ್ಲಿ, ಎಲ್ಲಾ ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತಿ ಹೊಂದಿದ ವಿದ್ಯಾರ್ಥಿ ಆಗಿದನು. ಇತನ ಬುದ್ಧಿವಂತಿಕೆಯನ್ನು ಮೆಚ್ಚಿ ಸರಸ್ವತಿ ವಿದ್ಯಾ ಮಂದಿರ ಶಾಲೆಯ ಆಡಳಿತ ವರ್ಗದವರಾದ ಲಕ್ಷ್ಮಿಕಾಂತ ಅಚ್ಚಿಗಾವೆ ಸರ್ ಹಾಗೂ ಸಿ.ಆರ್. ಸಿ. ನವನಾಥರಾವ ಬೋರಾಳೆ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಸಂಗೀತಾ ಮೇಡಂ, ರಾಹುಲ ಕ್ರಾಂತಿಕಾರಿ, ಸಾವಿತ್ರಾ ಮೇಡಂ, ಸೀಮಾ ಮೇಡಂ, ಅಂಜಲಿ ಮೇಡಂ, ಪ್ರೀತಿ ಮೇಡಂ, ಗೀತಾ ಮೇಡಂ, ಸಿಬಂಧಿ ವರ್ಗದವರು ಸೇರಿ ಮತ್ತು ಶಾಲೆಯ ಮದ್ದು ಮಕ್ಕಳು ಹರ್ಷವನು ವ್ಯಕ್ತಪಡಿಸಿದರು.
ಶಾಲೆಯ ಆಡಳಿತ ವರ್ಗದವರಾದ ಲಕ್ಷ್ಮಿಕಾಂತ ಅಚ್ಚಿಗಾವೆ ಸರ್ ಎಲ್ಲಾ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಪಡೆದು ನಮ್ಮ ಶಾಲೆಯ ಕೀರ್ತಿ ಮತ್ತು ಪಾಲಕರಿಗು ಕೀರ್ತಿ ತಂದು ಕೊಡಬೇಕು ಎಂದು ಮತ್ತು ಭವ್ಗತಗೀತೆಯ ಶ್ಲೋಕಗಳ ಉಪದೇಶ ನೀಡುವ ಮುಖಾಂತರ ವಿದ್ಯಾರ್ಥಿಗಳಿಗೆ ಒಂದು ಒಳ್ಳೆಯ ಮಾರ್ಗದರ್ಶನ ನೀಡುತ್ತಿದ್ದಾರೆ. ಮಾತನಾಡುವ ಮುಖಾಂತರ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದರು.

ವರದಿಗಾರರು.
ಕಲ್ಯಾಣ ಕರ್ನಾಟಕದ ವರದಿಗಾರರು.
ರಾಹುಲ ಕ್ರಾಂತಿಕಾರಿ.