*ಜನಸೇವಾ ಕಾರ್ಮಿಕ ಸಮೂಹದಿಂದ ಕಾರ್ಮಿಕ ಜಾಗೃತಿ ಅಭಿಯಾನ, ವಿವಿದ ಘಟಕಗಳ ಸ್ಥಾಪನೆ ಹಾಗೂ ಕಾರ್ಮಿಕ ಇಲಾಖೆಯ ಕಿಟ್ ವಿತರಣಾ ಕಾರ್ಯಕ್ರಮ*

ಗದಗ 24 ನಗರಸಭೆ ಕಾಲೇಜು ಮೈದಾನದಲ್ಲಿ ಜನಸೇವಾ ಕಾರ್ಮಿಕ ಸಮೂಹ, ಜನಸೇವಾ ಕರ್ನಾಟಕ ರಾಜ್ಯ ಕಾರ್ಮಿಕರ ಸಂಘ, ಜನಸೇವಾ ರೈತ ಮತ್ತು ಕಾರ್ಮಿಕ ಸಂಘ ಆಶ್ರಯದಲ್ಲಿ ಇಂದು ಕಾರ್ಮಿಕ ಜಾಗೃತಿ ಅಭಿಯಾನವನ್ನು ನಡೆಸಲಾಯಿತು. ಹಾಗೂ ಕಟ್ಟಡ ಕಾರ್ಮಿಕ, ಅಸಂಘಟಿತ ಕಾರ್ಮಿಕ, ಮನೆಕೆಲಸದವರ ಘಟಕ, ಸೇರಿದಂತೆ ವಿವಿದ ಘಟಕಗಳನ್ನು ಅನುಷ್ಟಾನ ಮಾಡಲಾಯಿತು.
ಕಾರ್ಮಿಕ ಜಾಗೃತಿ ಅಭಿಯಾನವನ್ನು ಉದ್ದೇಶಿಸುತ್ತ ಸೌಲಬ್ಯಗಳನ್ನು ಬಾಚಿಕೊಳ್ಳಲು ರಾಜ್ಯಾದ್ಯಂತ ನಕಲಿ ಕಾರ್ಮಿಕರು ಹೆಚ್ಚಾಗಿದ್ದಾರೆ ನಕಲಿ ಕಾರ್ಡಗಳ ತನಿಖೆಯಾಗಬೇಕು ಅಷ್ಟೇ ಅಲ್ಲದೆ ಕಾರ್ಮಿಕ ಇಲಾಖೆ ಕಾರ್ಮಿಕರಿಗೆ ನಕಲಿ ಕಾರ್ಮಿಕ ಕಿಟ್ ಪೋರೈಸುತ್ತಿದೆ ಲಾಕ ಡೌನ ಸಮಯದಲ್ಲಿ ಊಟದ ಕಿಟನಲ್ಲೂ ಸಾಕಷ್ಟು ಭ್ರಷ್ಟಾಚಾರವಾಗಿದೆ ಈಗ ಇಲಾಖೆ ಪೋರೈಸಿದ ಇಲೆಕ್ಟ್ರಿಷಿಯನ ಕಿಟ್ ಸಹ ನಕಲಿಯಾಗಿದೆ ಬ್ರ್ಯಾಂಡ ಲೆಬಲ್ ಅಂಟಿಸಿ ಕಳಪೆ ಮಟ್ಟದ ಡ್ರಿಲ್ಲಿಂಗ್ ಮಷಿನ್ ಪೋರೈಸಿದ್ದಾರೆ ಈ ಬಗ್ಗೆ ಜನಸೇವಾ ಕಾರ್ಮಿಕ ಸಮೂಹದಿಂದ ಕಾರ್ಮಿಕ ಇಲಾಖೆಗೆ ದೂರು ಸಲ್ಲಿಸಲಾಗಿದೆ ಈ ಬಗ್ಗೆ ಹೋರಾಟ ಮಾಡಬೇಕಾಗಿದೆ ಎಂದು ಸಂಸ್ಥಾಪಕ *ಕಾಮ್ರೆಡ ರಾ ದೇ ಕಾರಭಾರಿ* ಹೇಳಿದರು
ಸಂಘದ ರಾಜ್ಯ ಕಾನೂನು ಸಲಹೆಗಾರ ಆನಂದ ಬಣ್ಣದಬಾವಿ ಕಾರ್ಮಿಕರಿಗೆ ನ್ಯಾಯ ಸಿಗಬೇಕಾದರೆ ನ್ಯಾಯಾಂಗ ಇಲಾಖೆಯ ಮೂಲಕವೂ ನಾವು ಮುಂದೆ ಸಾಗಬೇಕು ಕಾರ್ಮಿಕ ಇಲಾಖೆ ಕಾರ್ಮಿಕರಿಗೆ ನ್ಯಾಯ ಕೊಡದೆ ಹೋದರೆ ನಾವು ಮುಂದಿನ ರೂಪುರೆಷೆಗಳನ್ನು ಅಳವಡಿಸಿಕೊಳ್ಳೊಣವೆಂದು ಹೇಳಿದರು.
ಸಂಘದ ರಾಜ್ಯ ಕಾರ್ಯದರ್ಶಿ ಮೇರಿ ರಾ ದೇ ಕಾರಭಾರಿ, ಸಹ ಕಾರ್ಯದರ್ಶಿ ಯಾಸೀನಸಾಬ ಬೊದ್ಲೆಖಾನ, ಜಿಲ್ಲಾ ಅಧ್ಯಕ್ಷರಾದ ಖುರ್ಷಿದ ಅಹ್ಮದ ಡಾಲಾಯತ್, ತಾಲೂಕ ಅಧ್ಯಕ್ಷರಾದ ಜಾಕಿರಹುಸೇನ ನಾಗನೂರ ಸೇರಿದಂತೆ ತಾಲೂಕ ವಿಭಾಗದ ವಿವಿದ ಘಟಕ ಮುಖಂಡರಾದ ರಾಜಾಬಕ್ಷಿ ಹನಗಲ್, ಯಮನೂರಸಾಬ ಮಾಲತೇಶ, ಮೆಹೆಬೂಬಸಾಬ ಯಾದಗಿರಿ, ಇಬ್ರಾಹಿಮಸಾಬ ಹುಯಿಲಗೋಳ, ಖಾಜೇಸಾಬ ಯಾದಗಿರಿ, ದಾವಲಬಿ ಕೌತಾಳ, ಫಾತಿಮಾ ಸೈಯದ್, ಮೆಹೆಬೂಬಿ ಯಾದಗಿರಿ, ಮೈಮುನಾಬೇಗಂ ಬೈರೆಕದಾರ, ಮುಂತಾದವರು ಉಪಸ್ಥಿತರಿದ್ದರು.
ಕಾರ್ಮಿಕ ಜಾಗೃತಿ ಕಾರ್ಯಕ್ರಮದ ನಂತರ ಕಟ್ಟಡ ಕಾರ್ಮಿಕ ಸದಸ್ಯರಿಗೆ ಸಂಘದ ಪದಾಧಿಕಾರಿಗಳಿಂದ ಕಾರ್ಮಿಕ ಇಲಾಖೆಯ ನ್ಯೂಟ್ರಿಷನ್ ಕಿಟ್ ಹಂಚಿಕೆ ಮಾಡಲಾಯಿತು.

ರಾ ದೇ ಕಾರಭಾರಿ : 7760433113
ಮೇರಿ ರಾ ದೇ ಕಾರಭಾರಿ :
8970690204

Leave a Reply

Your email address will not be published.