ಬೀದರ ನ್ಯೂಸ್

ಭಾಲ್ಕಿ ವರದಿ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಮತ್ತು ಸ್ತ್ರಿ ಶಕ್ತಿ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ಭಾಲ್ಕಿ ಪಟ್ಟಣದ ತಾಲೂಕು ಪಂಚಾಯತ್ ಕಚೇರಿ ಹಿಂದಗಡೆ ಮಕ್ಕಳ ಪಾಲನೆ ಪೋಷಣೆಗಾಗಿ ಹೊಸದಾಗಿ “ಶಿಶು ಪಾಲನ ಕೇಂದ್ರದ” ಉದ್ಘಾಟನೆಯನ್ನು ಮಾಡಲಾಯಿತು.

“ಶಿಶು ಪಾಲನ ಯೋಜನೆಯ” ಉದ್ದೇಶಗಳು:-
ಉದ್ಯೋಗಸ್ಥ ತಾಯಂದಿರ 6 ತಿಂಗಳಿಂದ 6 ವರ್ಷದ ಮಕ್ಕಳನ್ನು ದಿನಪೂರ್ತಿ ಸುರಕ್ಷಿತವಾಗಿ ನೋಡಿಕೊಳ್ಳುವುದು.
ಮಕ್ಕಳ ಪೌಷ್ಠಿಕ ಹಾಗೂ ಆರೋಗ್ಯ ಮಟ್ಟವನ್ನು ಸುಧಾರಿಸುವುದು.
ಮಕ್ಕಳ ಭೌತಿಕ, ಸಾಮಾಜಿಕ, ಭಾವನಾತ್ಮಕ ಬೆಳವಣಿಗೆಯನ್ನು ಉತ್ತೇಜಿಸುವುದು.
ಮಕ್ಕಳನ್ನು ಕಾಳಜಿಯಿಂದ ನೋಡಿಕೊಳ್ಳುವಂತೆ ತಾಯಂದಿರಿಗೆ ಹಾಗೂ ಪೋಷಕರಿಗೆ ಶಿಕ್ಷಣ ನೀಡುವುದು.

ಪೋಷಕರು ಈ ಯೋಜನೆಯ ಲಾಭ ಪಡೆದುಕೊಳ್ಳಬೇಕೆಂದು ವಿನಂತಿಸುತ್ತೇನೆ.
ವರದಿಗಾರರು
ರಾಹುಲ ಕ್ರಾಂತಿಕಾರಿ ಬೀದರ ಜಿಲ್ಲೆ.