ಬೀದರ ನ್ಯೂಸ್.

ಭಾಲ್ಕಿ ವರದಿ.
ಕಳೆದ ಸಂಜೆ ಭಾಲ್ಕಿ ತಾಲ್ಲೂಕಿನ ಗಡಿಭಾಗದ ಸಾಯಿಗಾವ್, ಮೆಹಕರ್, ಬೋಳೇಗಾವ್, ಶ್ರೀಮಾಳಿ, ಹಲ್ಸಿ ತೂಗಾವ್, ಆಳವಾಯಿ, ಗುಂಜರಗಾ, ಅಟ್ಟರ್ಗಾ ಗ್ರಾಮಗಳಲ್ಲಿ ಧೀಡಿರಾಗಿ ಸುರಿದ ಧಾರಾಕಾರ ಮಳೆಯಿಂದಾಗಿ ಹಾನಿಗೀಡಾದ ಸ್ಥಳಗಳಿಗೆ ಇಂದು ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲಿಸಲಾಯಿತು.

ಈ ಸಂಧರ್ಭದಲ್ಲಿ ಸತತ ಮಳೆಯಿಂದಾಗಿ ಮುಂಗಾರು ಹಂಗಾಮಿನ ಬೆಳೆಗಳು ಬಹುತೇಕ ನಷ್ಟವಾಗಿದ್ದು, ವಾರದೊಳಗೆ ಬೆಳೆಹಾನಿ ಕುರಿತು ವರದಿ ಸಲ್ಲಿಸುವಂತೆ ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿ ಹಾಗೂ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ತತಕ್ಷಣವೇ ಪರಿಹಾರ ನೀಡಬೇಕು ಮತ್ತು ಜೊತೆಗೆ ಕೆಲವು ಕಡೆ ರಸ್ತೆಗಳು, ಬ್ರಿಡ್ಜ್ ಗಳು ಹಾಳಾಗಿದ್ದು ಅವುಗಳ ದುರುಸ್ತಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ವರದಿಗಾರರು.
ರಾಹುಲ ಕ್ರಾಂತಿಕಾರಿ ಬೀದರ ಜಿಲ್ಲೆಯ.