ಔರಾದನಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ ಅವರ ಹುಟ್ಟು ಹಬ್ಬ ಆಚರಣೆ ಸಂಭ್ರಮ ಸಡಗರ ಸಂಭ್ರಮದಿಂದ ಆಚರಣೆ

ಔರಾದನಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರ ಹುಟ್ಟುಹಬ್ಬ ಆಚರಣೆ

ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿಯ ಮಾಜಿ ಅಧ್ಯಕ್ಷರು ಹಿರಿಯ ನಾಯಕರಾದ ಸನ್ಮಾನ್ಯ ಶ್ರೀ ಡಾ.ಜಿ.ಪರಮೇಶ್ವರ ಅವರ ಹುಟ್ಟುಹಬ್ಬ ಪ್ರಯುಕ್ತ ಇಂದು ಅಖಿಲ ಕರ್ನಾಟಕ ಜಿ ಪರಮೇಶ್ವರ್ ಯುವ ಸೈನ್ಯ ಔರಾದ ತಾಲೂಕ ಅಧ್ಯಕ್ಷರಾದ ದತ್ತಾತ್ರಿ ಸಿಂದೆ ಅವರ ನೇತೃತ್ವದಲ್ಲಿ ಔರಾದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಸುಧಾಕರ ಕೊಳ್ಳುರ ಅವರು ಮಾತನಾಡಿ ಡಾ ಜಿ ಪರಮೇಶ್ವರ್ ಅವರು ಸರಳ ಸಜ್ಜನಿಕೆಯ ರಾಜಕಾರಣಿಗಳಾಗಿದ್ದಾರೆ ಅವರು ಕೆಪಿಸಿಸಿ ಅಧ್ಯಕ್ಷರಾದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಧೀಮಂತ ನಾಯಕರು ಅಭಿವೃದ್ಧಿಯ ಹರಿಕಾರ ರಾಗಿದ್ದಾರೆ ಎಂದು ಅಭಿಮಾನ ವ್ಯಕ್ತಪಡಿಸಿದರು.

ಅಖಿಲ ಕರ್ನಾಟಕ ಜಿ ಪರಮೇಶ್ವರ್ ಯುವ ಸೈನ್ಯ ಔರಾದ ತಾಲೂಕ ಅಧ್ಯಕ್ಷರಾದ ದತ್ತಾತ್ರಿ ಸಿಂದೆ, ಮಾತನಾಡಿ ಪರಮೇಶ್ವರ್ ಅವರು ಸಾಮಾಜಿಕ ನಾಯಕತ್ವದೊಂದಿಗೆ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿ ಅಭಿವೃದ್ಧಿ ಕಡೆ ಕೊಂಡೊಯ್ಯುವಂತೆ ಜನ ನಾಯಕರಾಗಿದ್ದಾರೆ .ಎಲ್ಲಾ ಸಮುದಾಯಗಳು ಪ್ರೀತಿಸುವ ಜನ ನಾಯಕರಾಗಿದ್ದಾರೆ ಎಂದರೂ, ಪಟ್ಟಣ ಪಂಚಾಯತ್ ಸದಸ್ಯರು ಕಾಂಗ್ರೆಸ್ ಮುಖಂಡರಾದ ಬಂಟಿ ದರಬಾರೆ, ವೆಂಕಟರಾವ ಪಾಟೀಲ, ಬಾಲಾಜಿ ಕಾಸಲೆ, ರಾಜು ಹೆಡ್ಡ್, ಗಣಪತಿ ವಾಸುದ್ದೇವ, ಸುಭಾಷ್ ಲಾದ,ತುಕಾರಾಮ ಹಸನಮುಖಿ,ಶೆಂಕರ ಪಾಟೀಲ , ಸಂತೋಷ,ಭೀಮ ರಾವ, ಕೇಶವ ,ಶಿವರಾಜ, ಮುಂತಾದವರು ಉಪಸ್ಥಿತರಿದ್ದರು.

ವರದಿಗಾರರು.

ರಾಹುಲ ಕ್ರಾಂತಿಕಾರಿ ಬೀದರ ಜಿಲ್ಲೆ.

Leave a Reply

Your email address will not be published.