ತಾಲೂಕ ಪಂಚಾಯತ್ ಅಧಿಕಾರಿಗಳ ಜೊತೆ ಚರ್ಚೆ ಈಶ್ವರ ಖಂಡ್ರೆ ಶಾಸಕರು ಭಾಲ್ಕಿ ಜನ ಮೆಚ್ಚಿದ ನಾಯಕರು ಬಡವರ ಬಂಧು

ಇಂದು ಭಾಲ್ಕಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಅನುಷ್ಟಾನ ಅಧಿಕಾರಿಗಳ ಜತೆಗೆ ತುರ್ತು ಸಭೆ ನಡೆಸಿ, ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.

ಈ ಸಂಧರ್ಭದಲ್ಲಿ ಮಳೆಗೆ ಗ್ರಾಮೀಣ ಭಾಗದ ಮುಖ್ಯ ರಸ್ತೆಗಳ ತಗ್ಗು – ಗುಂಡಿಗಳು ತೇಲಿದ್ದು, ಜನ ಸಂಚಾರಕ್ಕೆ ತೊಂದರೆ ಆಗುತ್ತಿರುವುದರಿಂದ ಲೋಕೋಪಯೋಗಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಕೂಡಲೇ ಪ್ರಧಾನ ಮಂತ್ರಿ ಸಡಕ್ ಯೋಜನೆಯಡಿ ತಮ್ಮ ವ್ಯಾಪ್ತಿಯ ರಸ್ತೆಗಳಲ್ಲಿ ತಲೆಯೆತ್ತಿರುವ ತಗ್ಗುಗಳನ್ನು ತಕ್ಷಣಕ್ಕೆ ಮುಚ್ಚಿಸಿ ಜನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.

ಇದರ ಜೊತೆಗೆ ತಾಲೂಕಿನಲ್ಲಿ ಉತ್ತಮ ಮಳೆ ಆಗಿದ್ದು ಎಲ್ಲೆಡೆ ಹೆಚ್ಚು ಗಿಡಗಳನ್ನು ನೆಡಲು ಆದ್ಯತೆ ನೀಡಿ, ಮುಂಬರುವ ಕೆಲ ದಿನಗಳಲ್ಲಿ ಗ್ರಾಮೀಣ ಮುಖ್ಯ ರಸ್ತೆ, ಪಂಚಾಯಿತಿ ವ್ಯಾಪ್ತಿಯ ಕೆಲ ರಸ್ತೆಗಳ ಬದಿಯಲ್ಲಿ ಒಂದೇ ದಿನ 5 ಸಾವಿರ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದ್ದು, ಅರಣ್ಯ ಅಧಿಕಾರಿಗಳು ಗಿಡ ನೆಡಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಲಾಯಿತು.

ವರದಿಗಾರರು.

ರಾಹುಲ ಕ್ರಾಂತಿಕಾರಿ ಬೀದರ ಜಿಲ್ಲೆ.

Leave a Reply

Your email address will not be published.