75 ನೇ ಸ್ವತಂತ್ರ್ಯ ಅಮೃತ ಮಹೋತ್ಸವ ಸಮಾರಂಭ ನೆಹೆರು ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲು ಜಿಲ್ಲಾಡಳಿತಕ್ಕೆ – ಮಹೇಶ ಗೋರನಾಳಕರ್ ಮನವಿ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಧರ್ಭದಲ್ಲಿ ಜಿಲ್ಲಾಡಳಿತ ಎರಡು ವಾರದಿಂದ ಜಿಲ್ಲೆಯಾದ್ಯಂತ ಅರ್ಥಪೂರ್ಣವಾದ ಕಾರ್ಯಕ್ರಮಗಳು ಹಮ್ಮಿಕೊಂಡು ರಾಷ್ಟ್ರಭಕ್ತಿ ಜಾಗೃತಗೊಳಿಸುವ ಕೆಲಸವನ್ನು ತುಂಬಾ ಅಚ್ಚುಕಟ್ಟಾಗಿ ಮಾಡುತ್ತಿದೆ. ನಿಜಕ್ಕೂ ಇದು ಪ್ರಶಂಸನೀಯ
ಜಿಲ್ಲಾಡಳಿತ ಈಗಾಗಲೇ ನೆಹರೂ ಕ್ರೀಡಾಂಗಣದಲ್ಲಿ 100 ಅಡಿ ಎತ್ತರದ ಧ್ವಜಕಂಬಕ್ಕೆ ರಾಷ್ಟ್ರ ಧ್ವಜಾರೋಹಣ ಮಾಡಲು ನಿರ್ಧರಿಸಿದೆ.
ಬೀದರ ಜಿಲ್ಲೆಯ ಮಹಾಜನತೆ ಅಭೂತಪೂರ್ವ ಕಾರ್ಯಕ್ಕೆ ಸಾಕ್ಷಿ ಆಗಲಿದಾರೆ
ಹೀಗಾಗಿ ಆಗಸ್ಟ್ 15 ರಂದು ಪ್ರಮುಖ ಸಮಾರಂಭವನ್ನು ನೆಹರೂ ಕ್ರೀಡಾಂಗಣದಲ್ಲೇ ಆಯೋಜಿಸಬೇಕಾಗಿ ವಿನಂತಿಸುತ್ತೆವೆ.
ಪೋಲೀಸ್ ಗೌಂಡ್ ನಲ್ಲಿ ಮಾಡಿದರೆ ಮಕ್ಕಳು ಪಾಲಕರು ವೃಧ್ದರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಾಧ್ಯವಾಗುದಿಲ್ಲ
ಈ ವರ್ಷ 75 ನೇ ಸ್ವತಂತ್ರ ಅಮೃತ ಮಹೋತ್ಸವ ವಿನೂತನ ಮತ್ತು ಅರ್ಥಪೂರ್ಣವಾಗಿ ಆಚರಿಸುವುದರಿಂದ ನೆಹರೂ ಕ್ರೀಡಾಂಗಣ ನಗರದ ಮಧ್ಯಭಾಗದಲ್ಲಿ ಇದೆ ಎಲ್ಲ ಕಡೆಯಿಂದ ಬರುವವರಿಗೆ ತುಂಬಾ ಅನುಕುಲವಾಗಲಿದೆ
ಸಾಂಸ್ಕೃತಿಕ ಕಾರ್ಯಕ್ರಮಗಳು, ಕರಾಟೆ ಪ್ರದರ್ಶನ ಏರ್ ಶೊ ಕಾರ್ಯಕ್ರಮ ವಿಕ್ಷಿಸಲು ತುಂಬಾ ಉತ್ತಮವಾದ ಸ್ಥಳ ಇದೆ
ಕಾರಣ ಜಿಲ್ಲಾಡಳಿತ ವಿಶೇಷ ಕಾಳಜಿವಹಿಸಿ 75 ನೇ ಅಮೃತ ಮಹೋತ್ಸವ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಿ ಹೆಚ್ಚಿನ ಸಂಖ್ಯೆಯಲ್ಲಿ ಬೀದರ ಜಿಲ್ಲೆಯ ಮಹಾಜನತೆ ಭಾಗವಹಿಸುವಂತೆ ಅನುಕುಲ ಮಾಡಿಕೊಡಲು ಜಿಲ್ಲಾಡಳಿತಕ್ಕೆ ಗೌರವಪೂರ್ವಕವಾಗಿ ಕಳಕಳಿಯಿಂದ ವಿನಂತಿಸಿಕೊಳ್ಳುತ್ತೆವೆ.
ವಂದನೆಗಳೊಂದಿಗೆ
ಇಂತಿ ತಮ್ಮ ವಿಶ್ವಾಸಿ
ಮಹೇಶ ಗೋರನಾಳಕರ್
ಅಧ್ಯಕ್ಷರು
ಬುಧ್ದ ಬೆಳಕು ಟ್ರಸ್ಟ್ ಬೀದರ
ಪ್ರಕಾಶ ರಾವಣ
ಜಿಲ್ಲಾಧ್ಯಕ್ಷರು
ಯುವ ಘಟಕ ಭೀಮ್ ಆರ್ಮಿ ಬೀದರ
ಮುನಿರ್ ಅಹ್ಮದ್
ಅಧ್ಯಕ್ಷರು
ಗ್ಲೋಬಲ್ ಸೋಶಿಯಲ್ ಮತ್ತು ವೆಲ್ಫೇರ್ ಫೌಂಡೇಶನ್ ಬೀದರ
ಮೊಜಮಿಲ್
ಅಧ್ಯಕ್ಷರು
ಫಸ್ಟ್ ಹೆಲ್ಪಿಂಗ್ ಹ್ಯಾಂಡ್ ಹೆಲ್ತ್ ಮತ್ತು ಎಜುಕೇಶನ್ ಚ್ಯಾರಿಟೇಬಲ್ ಟ್ರಸ್ಟ್ ಬೀದರ.
ವರದಿಗಾರರು.
ರಾಹುಲ ಕ್ರಾಂತಿಕಾರಿ ಬೀದರ ಜಿಲ್ಲೆ.