ಮುನ್ಸಿಪಲ್ ಹೈಸ್ಕೂಲ್ ಪ್ರಕರಣ ಪರಿಶಿಲನೆಗೆ ಅಧಿಕಾರಿಗಳ ಹಿಂದೇಟು . ಹೊಂದಾಣಿಕೆಯಾಗಿದೆಯಾ? ಎಂದು ಪ್ರಶ್ನಿಸಿ ಮನವಿ

ಗದಗ, ಕಳೆದ ಒಂದು ತಿಂಗಳಿನಿಂದ ಗದಗ ಬೆಟಗೇರಿ ನಗರಸಭೆಯ ಸಂಯುಕ್ತ ಪದವಿಪೂರ್ವ ಕಾಲೆಜು ಇದರ ಪ್ರಾರ್ಥಮಿಕ ಹಾಗೂ ಪ್ರೌಡ ಶಾಲೆ ವಿಭಾಗಕ್ಕೆ ಸಂಬಂದಿಸಿದ ನ್ಯೂನ್ನತೆಗಳ ಬಗ್ಗೆ ದೂರು ಧಾಕಲಿದಲಾಗಿತ್ತು.
ದೂರು ಧಾಕಲಿಸಿದ ಬಳಿಕ ಹೋರಾಟಗಾರ ರಾ ದೇ ಕಾರಭಾರಿಯವರಿಗೆ ಸಾಕಷ್ಟು ಬೆದರಿಕೆಗಳು ಬಂದವು ಹಾಗೂ ಸದರಿ ಶಾಲೆಯ ವಿಷಯವಾಗಿ ಡಿ ಡಿ ಪಿ ಐ ಕಚೇರಿಯಲ್ಲಿ ಪ್ರಕರಣ ಧಾಕಲಿಸಲು ಹೊದಾಗ ಜನಸೇವಾ ಸಮೂಹ ಕಾರ್ಯದರ್ಶಿ ಶ್ರೀಮತಿ ಮೇರಿ ರಾದೇ ಕಾರಭಾರಿ ಇವರೊಂದಿಗೆ ಡಿಡಿಪಿಐ ಕಚೇರಿಯ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ್ದರು ಈ ಬಗ್ಗೆಯೂ ಅಂದು ಸ್ಥಳದಲ್ಲಿಯೇ ಲಿಖಿತ ದೂರನ್ನು ಸಹ ಸಲ್ಲಿಸಲಾಗಿತ್ತು.
ಬಿಇಓ ರವರು ಪರಿಶಿಲಿಸಿ ಅದರ ವರದಿಯನ್ನು ಮೆಲಾಧಿಕಾರಿಗಳಿಗೆ ತಲುಪಿಸಿದ್ದಾರೆ ವರದಿಗೆ ಸಂಬಂದಿಸಿದಂತೆ ಕ್ರಮ ಜರುಗಿಸಲು ಕಳೆದ ಒಂದು ತಿಂಗಳಿನಿಂದ ಸತತವಾಗಿ ಅಲೆದಾಡಿಸಲಾಗುತ್ತಿದೆ ಹಾಗೂ ಇಂದು ದೂರವಾಣಿ ಮೂಲಕ ವಿಚಾರಿಸಿದಾಗ ನಮಗೆ ಸಂಬಂದವಿಲ್ಲ ಎಂದು ಡಿಡಿಪಿಐ ರವರು ಕೈ ಚೆಲ್ಲಿಕೊಂಡಿದ್ದಾರೆ ಹಾಗೂ ನಗರಸಭೆ ಮಾಡಿದ ಪರಿಶೀಲನೆಯೂ ಹೊಂದಾಣಿಕೆಯ ಪರಿಶೀಲನೆಯಾಗಿದೆ ಎಂದು ಸಹ ಪರಿಶೀಲನಾ ವರದಿಗೆ ಉತ್ತರ ನೀಡಲಾಗಿದೆ.
ಸದರಿ ಪ್ರಕರಣದ ಕುರಿತು ಹೋರಾಟ ಆರಂಭವಾದ ಸಮಯದಿಂದ ನಮಗೆ ಸಾಕಷ್ಟು ಬೆದರಿಕೆಗಳು ಬರುತ್ತಿರುವ ಬಗ್ಗೆ ಹಾಗೂ ಅದೇ ಶಾಲೆಯಲ್ಲಿ ಕಲಿಯುತ್ತಿರುವ ನನ್ನ ಎರಡು ಹೆಣ್ಣುಮಕ್ಕಳನ್ನು ಶಾಲೆಯಲ್ಲಿ ತ್ಯೂಚ್ಚವಾಗಿ ಕಾಣುತ್ತಿರುವ ಬಗ್ಗೆಯೂ ಸಹ ಮೇಲಾಧಿಕಾರಿಗಳಿಗೆ ವಿವರಿಸಲಾಗಿದೆ ಅಷ್ಟೇ ಅಲ್ಲದೆ ಶಿಕ್ಷಣ ಹಕ್ಕು ಕಾಯಿದೆ 2009 ರ ಅಡಿ ಶಿಕ್ಷಣ ವಂಚಿತವಾಗುತ್ತಿರುವ ಕುರಿತು ಲಿಖಿತ ದೂರು ಸಲ್ಲಿಸಿದರೂ ಸಹಿತ ಡಿಡಿಪಿಐ ರವರು ನಮಗೆ ಸಂಬಂದವಿಲ್ಲ ಎಂದು ಹೇಳುತ್ತಿರುವುದು ಸಮಂಜಸವಾದ ಉತ್ತರವಲ್ಲ.
ಈ ನಿಟ್ಟಿನಲ್ಲಿ ಸಂಬಂದವಿಲ್ಲವೆಂದು ಬಾಯಿಂದ ಹೇಳಿದ ಮಾತನ್ನೇ ಲಿಖಿತವಾಗಿ ನೀಡಿ ಎಂದು ಹಾಗೂ ಈ ಮೇಲಿನ ವಿಷಯಗಳಿಗೆ ಲಿಖಿತ ಸ್ಪಷ್ಟಿಕರಣ ನೀಡಬೇಕೆಂದು ಇಂದು ಮಾನ್ಯ ಡಿಡಿಪಿಐ ರವರಿಗೆ ಕಾಮ್ರೆಡ. ರಾ ದೇ ಕಾರಭಾರಿ, ಕರ್ನಾಟಕ ಮಾದಿಗ ಸಂಘರ್ಷ ಸಮಿತಿ ಗದಗ ಜಿಲ್ಲಾ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಪ ಪರಾಪೂರ, ಶ್ರೀಮತಿ ಮೇರಿ ರಾದೇ ಕಾರಭಾರಿ ಮನವಿ ಸಲ್ಲಿಸಿದರು.

Leave a Reply

Your email address will not be published.