ರೆಡ್ಡಿ ಮತ್ತು ಬಿಜೆಪಿ

ಜನಾರ್ಧನ ರೆಡ್ಡಿ ಅವರಿಂದ ಹೊಸ ಪಕ್ಷ ಘೋಷಣೆ: ಸ್ವತಂತ್ರವಾಗಿ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಎಂಬ ಹೊಸ ರಾಜಕೀಯ ಪಕ್ಷವನ್ನು ಆರಂಭಿಸಲಾಗುವುದು ಎಂದು ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ದೋಷಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ ಅವರು, ‘ನಾನು ಬಿಜೆಪಿಗಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಸ್ವಂತ ಕೆಲಸ ಬದಿಗೊತ್ತಿ ಪಕ್ಷಕ್ಕಾಗಿ ದುಡಿದಿದ್ದೆ. ಆದರೆ, ನನ್ನ ಕಷ್ಟದ ದಿನಗಳಲ್ಲಿ ಬಿ.ಎಸ್. ಯಡಿಯೂರಪ್ಪ ಮತ್ತು ಜಗದೀಶ ಶೆಟ್ಟರ್ ಹೊರತಾಗಿ ಪಕ್ಷದ ಯಾರೊಬ್ಬರೂ ಜತೆಗೆ ನಿಲ್ಲಲಿಲ್ಲ.ಹಲವು ವರ್ಷಗಳ ಕಾಲ ಬಿಜೆಪಿಗಾಗಿ ರಾಜ್ಯದ ಉದ್ದಗಲಕ್ಕೆ ಸುತ್ತಾಡಿದ್ದೆ. ಮೊದಲ ಬಾರಿಗೆ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ತರುವಲ್ಲಿ ನನ್ನ ಪಾತ್ರವೂ ಇತ್ತು. ಅಧಿಕಾರ ಹಸ್ತಾಂತರ ಮಾಡದ ಜೆಡಿಎಸ್ ವಿರುದ್ಧ ಹೋರಾಡಿ ಸ್ವತಂತ್ರ ಬಿಜೆಪಿ ಸರ್ಕಾರ ತರುವಲ್ಲೂ ನನ್ನ ಶ್ರಮ ಇತ್ತು. ಆದರೆ, ನಾನು ಜೈಲಿಗೆ ಹೋದಾಗ ಯಾರೂ ಬೆಂಬಲಕ್ಕೆ ನಿಲ್ಲಲಿಲ್ಲ’ ಎಂದರು.ಬಿ ಶ್ರೀರಾಮುಲು ನಮ್ಮ ಸಹೋದರನಿದ್ದಂತೆ. ಅವಕಾಶ ಸಿಕ್ಕ ಎಲ್ಲ ಸಂದರ್ಭಗಳಲ್ಲಿ ನನ್ನ ಬದಲಿಗೆ ಅವರಿಗೆ ಅಧಿಕಾರ ನೀಡುವಂತೆ ಪಕ್ಷದ ನಾಯಕರಲ್ಲಿ ಮನವಿ ಮಾಡಿದ್ದೆ. ಈಗಲೂ ನಮ್ಮ ಹೊಸ ಪಕ್ಷ ಸೇರುವಂತೆ ಒತ್ತಡ ಹೇರುವುದಿಲ್ಲ. ಅವರಿಗೆ ತೋಚಿದಂತೆ ನಿರ್ಧಾರ ಕೈಗೊಳ್ಳಲಿ’ ಎಂದು ರೆಡ್ಡಿ ಹೇಳಿದರು.

ಜನಾರ್ಧನ ರೆಡ್ಡಿ ಹೊಸ ಪಕ್ಷ ಸ್ಥಾಪನೆಯ ಹಿಂದಿನ ಮರ್ಮ ಹಾಗು ಧೇಯೋಧ್ದೇಶಗಳು ಹೀಗಿರಬಹುದೆ.? ಬಲ್ಲಂತಹ ರಾಜಕೀಯ ವಿಮರ್ಷಕರು ವಿಮರ್ಷಿಸುವರೆ?

https://googleads.g.doubleclick.net/pagead/ads?client=ca-pub-4369350038370549&format=378×300&w=378&h=300&ptt=12&iu=7249948486&adk=2708838118&output=html&bc=7&pv=1&wgl=1&asnt=0-777852989189014390&dff=georgia%2C%20garamond%2C%20%22Times%20New%20Roman%22%2C%20serif&prev_fmts=378×300&prev_slotnames=7249948486&brdim=0%2C0%2C0%2C0%2C360%2C0%2C360%2C628%2C378%2C659&ifi=2&rafmt=13&pfx=0&adf=3080081558&nhd=0&adx=0&ady=2622&oid=2&is_amp=5&amp_v=2301031703000&d_imp=1&c=383002980&ga_cid=amp-0Ab3HPUvn83AToGitKyfiA&ga_hid=2980&dt=1674091157621&biw=378&bih=706&u_aw=360&u_ah=800&u_cd=24&u_w=360&u_h=800&u_tz=330&u_his=1&vis=1&scr_x=0&scr_y=357&url=https%3A%2F%2Fkarnatakafocus.com%2F2023%2F01%2F18%2Framulu-deletes-tweet-inviting-workers-to-janardhan-reddy-party%2F&loc=https%3A%2F%2Fkarnatakafocus.com%2F2023%2F01%2F18%2Framulu-deletes-tweet-inviting-workers-to-janardhan-reddy-party%2F%3Famp%3D1&ref=https%3A%2F%2Fkarnatakafocus.com%2F2023%2F01%2F18%2Framulu-deletes-tweet-inviting-workers-to-janardhan-reddy-party%2F&bdt=2216&dtd=483&__amp_source_origin=https%3A%2F%2Fkarnatakafocus.com

1. ತನ್ನ ಮೇಲಿನೆಲ್ಲಾ ಕೇಸುಗಳ ವಿಲೆವಾರಿಯಾಗದೆ ವಿಳಂಬವಾಗಿರುವದು.

2. ತನ್ನ ಮೇಲಿನೆಲ್ಲಾ ಕೇಸುಗಳು ತನ್ನ ಪರವಾಗೆ ತೀರ್ಪು ಪಡೆಯುವ ತಂತ್ರ.

3. ತನ್ನ ಪರವಾದ ವ್ಯಕ್ತಿಗಳಿಗೆ ನಿಯೋಜಿತ ಸ್ಥಳಗಳಲ್ಲಿ ಟಿಕೆಟ್ ಪಡೆವುದು.

4. ಶ್ರೀರಾಮುಲು ಸೇರಿದಂತೆ ತಮ್ಮ ಹಿಂಬಾಲಕರಿಗೆ ಬೇಕಾದ ಮಂತ್ರಿ ಪದವಿ ಪಡೆಯುವದು.ಮೇಲೆ ಹೇಳಿದಕ್ಕೆ ಬಿಜೆಪಿ ಬಗ್ಗದಿದ್ದಲ್ಲಿ ತನ್ನ ಪಕ್ಷದವತಿಯಿಂದ ಚುನಾವಣೆಯನ್ನೆದುರಿಸಿ, ಬೆರಳೆಣಿಕೆ ಸ್ಥಾನಪಡೆದರು king makeರಾಗಿ ಬೇಳೆ ಬೇಯಿಸಿಕೊಳ್ಳುವ ಮಹತ್ವಾಕಾಂಕ್ಷೆಯ ಹುನ್ನಾರವಿರಬಹುದೇನೊ?

ಕಾಂಗ್ರೆಸ್‌ಗೆ ಮುಳುವಾಗಲಿದೆ ಜನಾರ್ದನ ರೆಡ್ಡಿ ಹೊಸ ಪಕ್ಷ

ಇದೊಂದು ಪಕ್ಕಾ ವ್ಯವಸ್ಥಿತ ಯೋಜನೆ. ಚುನಾವಣೆಗೆಂದೇ ಮಾಡಿಕೊಂಡ ಕರಾರುವಾಕ್ ಸಿದ್ಧತೆ. ತಮ್ಮನ್ನು ಬಳಸಿಕೊಂಡು ಬೀಸಾಕಿರುವ ಬಿಜೆಪಿ ವಿರುದ್ಧ ನಡೆಸಿರುವ ಅಘೋಷಿತ ಬಂಡಾಯ. ಆದರೆ, ಇಲ್ಲಿ ಏಟು ತಿನ್ನಲಿರುವುದು ಕಾಂಗ್ರೆಸ್. ಚೌಕಾಶಿ ಅವಕಾಶ ಕಳೆದುಕೊಳ್ಳುವ ಭೀತಿಗೆ ಸಿಲುಕಿರುವುದು ಜೆಡಿಎಸ್. ಅನಿವಾರ್ಯವಾಗಿ ಬೆಂಬಲ ಯಾಚಿಸಬೇಕಾದ ಪರಿಸ್ಥಿತಿಗೆ ಬರಲಿರುವುದು ಬಿಜೆಪಿ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿ ತಮ್ಮನ್ನು ಕಡೆಗಣಿಸಿರುವುದರ ಸೇಡನ್ನು ಈ ರೀತಿ ತೀರಿಸಿಕೊಳ್ಳಲಿದ್ದಾರೆಯೆ? ಜನಾರ್ದನ ರೆಡ್ಡಿಯನ್ನು ಮುಂದೆ ಬಿಟ್ಟು, ಬಿಜೆಪಿಯನ್ನು ಮಣಿಸುವ ಯೋಜನೆಯಿದು ಎಂಬ ಅನುಮಾನವನ್ನು ಹುಟ್ಟುಹಾಕಿದೆ ಈ ಬೆಳವಣಿಗೆ.

ಇಲ್ಲಿ ನಡೆದಿರುವುದೆಲ್ಲವೂ ಪಕ್ಕಾ ತೆಲುಗು ಕಮರ್ಷಿಯಲ್ ಸಿನಿಮಾದಂತೆಯೇ. ವೈಭವವೂ ಅದೇ ರೀತಿ. ನಡೆಯುತ್ತಿರುವ ದಾರಿಯೂ ಥೇಟ್ ಸಿನೀಮಯವೇ. ಹಲವಾರು ವರ್ಷಗಳ ಕಾಲ ಸಾಮಾಜಿಕ ಹಾಗೂ ರಾಜಕೀಯ ವನವಾಸ ಅನುಭವಿಸಿರುವ ವ್ಯಕ್ತಿಯೇ ಇಲ್ಲಿ ನಾಯಕ. ಸಾಕಷ್ಟು ಹಣವಿದ್ದರೂ ನೆಮ್ಮದಿಯ ಬದುಕನ್ನು ಬದುಕಲಾರದ ಅಸಹಾಯಕತೆ ಇಲ್ಲಿಯ ಮೆಲೊಡ್ರಾಮ. ದಕ್ಷಿಣ ಭಾರತದಲ್ಲಿ ಖಾತೆ ತೆರೆಯಲು ನೆರವಾದ ತಮ್ಮನ್ನೇ ಬದಿಗಿಟ್ಟು ಆಡಳಿತ ನಡೆಸುತ್ತಿರುವುದಲ್ಲದೇ, ತಮ್ಮನ್ನೇ ಹತ್ತಿಕ್ಕಲು ಯತ್ನಿಸಿದ ಬಿಜೆಪಿ ಪ್ರಯತ್ನದ ವಿರುದ್ಧ ಬಂಡಾಯ ಏಳುವುದೇ ಇಲ್ಲಿಯ ಕ್ಲೈಮ್ಯಾಕ್ಸ್. ನಾಯಕಿ ಇಲ್ಲದ ಸಿನಿಮಾದಂತಿರುವ ಈ ರಾಜಕೀಯದಲ್ಲಿ ಜನಾರ್ದನ ರೆಡ್ಡಿಯೇ ನಾಯಕ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರೇ ನಿರ್ದೇಶಕ. ಸದ್ಯಕ್ಕೆ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಸಿನಿಮಾ ಶೂಟಿಂಗ್ ಶುರುವಾದಂತಿದೆ.

ರೆಡ್ಡಿಯದೆ ಅಬ್ಬರ

https://googleads.g.doubleclick.net/pagead/ads?client=ca-pub-4369350038370549&format=378×300&w=378&h=300&ptt=12&iu=7249948486&adk=1518057386&output=html&bc=7&pv=1&wgl=1&asnt=0-16064999693046484500&dff=georgia%2C%20garamond%2C%20%22Times%20New%20Roman%22%2C%20serif&prev_fmts=378×300%2C378x300&prev_slotnames=7249948486%2C7249948486&brdim=0%2C0%2C0%2C0%2C360%2C0%2C360%2C672%2C378%2C706&ifi=3&rafmt=13&pfx=0&adf=19457306&nhd=0&adx=0&ady=4842&oid=2&is_amp=5&amp_v=2301031703000&d_imp=1&c=383002980&ga_cid=amp-0Ab3HPUvn83AToGitKyfiA&ga_hid=2980&dt=1674091176498&biw=378&bih=706&u_aw=360&u_ah=800&u_cd=24&u_w=360&u_h=800&u_tz=330&u_his=1&vis=1&scr_x=0&scr_y=2262&url=https%3A%2F%2Fkarnatakafocus.com%2F2023%2F01%2F18%2Framulu-deletes-tweet-inviting-workers-to-janardhan-reddy-party%2F&loc=https%3A%2F%2Fkarnatakafocus.com%2F2023%2F01%2F18%2Framulu-deletes-tweet-inviting-workers-to-janardhan-reddy-party%2F%3Famp%3D1&ref=https%3A%2F%2Fkarnatakafocus.com%2F2023%2F01%2F18%2Framulu-deletes-tweet-inviting-workers-to-janardhan-reddy-party%2F&bdt=21093&dtd=17&__amp_source_origin=https%3A%2F%2Fkarnatakafocus.com

https://d-159319949218594673.ampproject.net/2301031703000/frame.html

ತಪ್ಪೆಲ್ಲ ತನ್ನೊಬ್ಬನದೇ ಎಂಬಂತೆ ನಡೆದುಕೊಳ್ಳುತ್ತಿರುವ ರಾಜಕೀಯದಿಂದ ಬೇಸತ್ತಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಬಂಡೆದ್ದು ಹೊಸ ಪಕ್ಷ ಸ್ಥಾಪಿಸಿ, ಬಿಜೆಪಿಗೆ ಬುದ್ಧಿ ಕಲಿಸಲು ಯತ್ನಿಸುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಭಾಸವಾಗುತ್ತಿದೆ. ಆದರೆ, ಒಳಗೆ ನಡೆದಿರುವುದು ಬೇರೆಯದೇ ಬೆಳವಣಿಗೆ. ಬಿಜೆಪಿ ಬಾಯಿಬಿಟ್ಟಿಲ್ಲ. ಗಣಿಧಣಿ ನಮ್ಮವರಲ್ಲ ಎಂದು ಕೂಡ ಹೇಳಿಲ್ಲ. ಕ್ರಿಮಿನಲ್ ಹಿನ್ನೆಲೆಯುಳ್ಳ ಲೆಕ್ಕವಿಲ್ಲದಷ್ಟು ಜನ ಇವತ್ತು ಸಮಾಜ ಸೇವಕರಾಗಿ, ಗಣ್ಯ ವ್ಯಕ್ತಿಗಳಾಗಿ, ರಾಜಕೀಯ ನಾಯಕರಾಗಿ, ಮಂತ್ರಿ ಮಹೋದಯರಾಗಿ ಮೆರೆಯುತ್ತಿದ್ದಾರೆ. ಅದರಲ್ಲಿ ಬಿಜೆಪಿ ಕೂಡ ಹೊರತಲ್ಲ.

ಪ್ರಜಾಪ್ರಭುತ್ವದಲ್ಲಿ ಇಂಥವರೇ ರಾಜಕಾರಣದಲ್ಲಿರಬೇಕು ಎಂದು ಹೇಳಲಿಕ್ಕಾಗುವುದಿಲ್ಲ. ಆದರೆ, ಕ್ರಿಮಿನಲ್ ಹಿನ್ನೆಲೆಯುಳ್ಳವರು ರಾಜಕಾರಣಕ್ಕೆ ಬಂದರೆ, ಅಧಿಕಾರ ಅವರ ಕೈವಶವಾದರೆ ಆಗುವ ಅನಾಹುತಗಳೇನು ಎನ್ನುವುದಕ್ಕೆ ರಾಜ್ಯ ರಾಜಕಾರಣವೇ ಸಾಕ್ಷಿ. ತುಂಬಾ ಹಿಂದಕ್ಕೆ ಹೋಗಿ ನೋಡಬೇಕಾಗಿಯೂ ಇಲ್ಲ. ಕೇವಲ ೧೬ ವರ್ಷಗಳ ಹಿಂದಿನ ರಾಜ್ಯ ರಾಜಕಾರಣವನ್ನು ಮೆಲುಕು ಹಾಕಿದರೆ, ರಾಜ್ಯ ಎಂತಹ ದುರಾಡಳಿತಕ್ಕೆ ಈಡಾಗಿ ಎಂತಹ ದೈನೇಸಿ ಸ್ಥಿತಿಗೆ ಹೋಗಿತ್ತು ಎನ್ನುವುದು ಕಣ್ಣಮುಂದೆ ನಿಲ್ಲುತ್ತದೆ.

ಬಿಜೆಪಿಗೆ ಅಧಿಕಾರ ತಂದುಕೊಟ್ಟ ರೆಡ್ಡಿ

2004ರಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ರಚಿಸಲಾಗಿತ್ತು. ಧರಂ ಸಿಂಗ್ ಮುಖ್ಯಮಂತ್ರಿಯಾಗಿ, ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದರು. ಕೇವಲ ಎರಡು ವರ್ಷ ಕಳೆಯುವುದರಲ್ಲಿ, ಜೆಡಿಎಸ್ನ ಎಚ್.ಡಿ. ಕುಮಾರಸ್ವಾಮಿ ಮತ್ತು ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಮೈತ್ರಿ ಮಾಡಿಕೊಂಡು, ಬಿಜೆಪಿ ರಾಜ್ಯದಲ್ಲಿ ಮೊದಲ ಬಾರಿ ಅಧಿಕಾರದ ರುಚಿ ನೋಡಲು ಕಾರಣರಾದರು.

ಅಧಿಕಾರವಿಲ್ಲದೆ ಹಪಹಪಿಸುತ್ತಿದ್ದ ಬಿಜೆಪಿಯ ಯಡಿಯೂರಪ್ಪನವರಿಗೆ ಅಂದು ಬೆಂಬಲವಾಗಿ ನಿಂತವರು ಇದೇ ಬಳ್ಳಾರಿಯ ಗಣಿಧಣಿ ಜನಾರ್ದನ ರೆಡ್ಡಿ. ಅಕ್ರಮ ಗಣಿಗಾರಿಕೆಯಿಂದ ನಾಡಿನ ನೈಸರ್ಗಿಕ ಸಂಪತ್ತನ್ನು ಲೂಟಿಗೈದು ಗಳಿಸಿದ್ದ ಹಣವನ್ನು ಶಾಸಕರ ಖರೀದಿಗೆ ಬಳಸಲಾಗಿತ್ತು. ಅದರ ಫಲವಾಗಿ 2008ರಲ್ಲಿ ಸ್ವತಂತ್ರವಾಗಿ ಸರ್ಕಾರ ರಚಿಸಿ ಅಧಿಕಾರಕ್ಕೆ ಬಂದ ಬಿಜೆಪಿ, ಆಪರೇಶನ್ ಕಮಲವನ್ನು ಪರಿಚಯಿಸುವ ಮೂಲಕ ಕರ್ನಾಟಕದ ಮಾನವನ್ನು ರಾಷ್ಟ್ರಮಟ್ಟದಲ್ಲಿ ಹರಾಜಿಗಿಟ್ಟಿತು.

2006ರ ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರ ರಾಜ್ಯದ ಮೇಲೆ ಮಾಡಿದ ಅನಾಹುತ ಅಷ್ಟಿಷ್ಟಲ್ಲ. ಅಲ್ಲಿಯವರೆಗೆ ಒಂದು ರೀತಿಯ ಸಂಯಮದ ಮಟ್ಟದಲ್ಲಿದ್ದ ರಾಜ್ಯ ರಾಜಕಾರಣ, ಗಣಿಧಣಿ ರೆಡ್ಡಿಗಳ ಆಗಮನದಿಂದ ಅಡ್ಡದಾರಿ ಹಿಡಿಯಿತು. ರೆಸಾರ್ಟ್ ರಾಜಕಾರಣ ಜಾರಿಗೆ ಬಂತು. ನೈಸರ್ಗಿಕ ಸಂಪತ್ತಿನ ಲೂಟಿಗೆ ಸರ್ಕಾರಿ ಮುದ್ರೆ ಬಿತ್ತು. ಬಳ್ಳಾರಿ ಸುತ್ತಮುತ್ತಲ ಸಾಮಾಜಿಕ ಬದುಕು ಬರ್ಬರವಾಯಿತು.

ಇಲ್ಲಿ ಯೋಚಿಸಬೇಕಾದ ಸಂಗತಿ ಎಂದರೆ ಬಿ.ಎಸ್. ಯಡಿಯೂರಪ್ಪನವರ ರಾಜಕೀಯ ಏರಿಕೆ ಹಾಗೂ ನೈತಿಕ ಇಳಿಕೆ. 1972ರಲ್ಲಿ ಶಿಕಾರಿಪುರ ಪುರಸಭೆ ಸದಸ್ಯನಾಗಿ ರಾಜಕಾರಣಕ್ಕೆ ಅಡಿಯಿಟ್ಟ ಬಿ.ಎಸ್. ಯಡಿಯೂರಪ್ಪನವರು, 1983ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ವಿಧಾನಸೌಧದ ಮೆಟ್ಟಿಲು ಹತ್ತಿದರು. 1983ರಿಂದ 2006ರವರೆಗೆ, ಹೋರಾಟವನ್ನೇ ಬದುಕನ್ನಾಗಿಸಿಕೊಂಡರು. ಅಧಿಕಾರಕ್ಕೇರದೆ ಅವಕಾಶವಂಚಿತರಾಗಿಯೇ ಉಳಿದುಕೊಂಡಿದ್ದರು.

ದಿಲ್ಲಿ ದೊರೆಗಳಿಗೂ ಬೇಕಿತ್ತು

ಇಂತಹ ಹೋರಾಟದ ಹಿನ್ನಲೆಯುಳ್ಳ ರಾಜಕಾರಣಿ ಯಡಿಯೂರಪ್ಪನವರು ಏಕಾಏಕಿಯಾಗಿ ಅಕ್ರಮ ಹಾದಿಯಲ್ಲಿ ಹಣ ಗಳಿಸಿದ ಗಣಿಧಣಿಯ ಕೈವಶವಾಗಿಬಿಟ್ಟರು. ಅಡ್ಡಹಾದಿಗೆ ಬಿದ್ದು ಶಾಸಕರ ಖರೀದಿಗೆ ನಿಂತು ಅಧಿಕಾರಕ್ಕೇರುವ ಅನೈತಿಕತೆ ತೋರಿದರು. ಇದನ್ನು ಗಮನಿಸಿದರೆ, ಕಾಣಿಸುವುದು ದಿಲ್ಲಿಯ ಮಹತ್ವಕಾಂಕ್ಷೆಯ ಬಿಜೆಪಿ ನಾಯಕತ್ವ ಹಾಗೂ ಸುದೀರ್ಘ ಕಾಲ ಅಧಿಕಾರವಿಲ್ಲದೇ ಹತಾಶರಾಗಿದ್ದ ಯಡಿಯೂರಪ್ಪನವರ ರಾಜಕೀಯ ಮಹತ್ವಕಾಂಕ್ಷೆ.1999ರಲ್ಲಿ ಕಾಂಗ್ರೆಸ್‌ನ ಸೋನಿಯಾ ಗಾಂಧಿ ಬಳ್ಳಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದಾಗ, ಬಿಜೆಪಿಯಿಂದ ಸುಷ್ಮಾ ಸ್ವರಾಜ್ ಕಣಕ್ಕಿಳಿದರು. ಅಂದು ಬಳ್ಳಾರಿಯಲ್ಲಿ ಸುಷ್ಮಾ ಅವರ ಎಡಬಲಕ್ಕೆ ನಿಂತವರು, ಶಕ್ತಿಮೀರಿ ಖರ್ಚು ಮಾಡಿದವರು- ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಎಂಬ ಗಣಿಧಣಿಗಳು.

ಗಣಿಧಣಿಗಳ ಈ ಸೇವೆಗೆ ಸಂತೃಪ್ತರಾದ ಬಿಜೆಪಿಯ ದಿಲ್ಲಿ ನಾಯಕರು, ಬೇಕಾದಾಗಲೆಲ್ಲ ಅವರನ್ನು ಬಳಸಿಕೊಂಡರು. ತಲೆ ಮೇಲಿಟ್ಟು ಆಶೀರ್ವದಿಸಿದ ಅಮ್ಮನ ಕೃಪೆಯಿಂದ ರೆಡ್ಡಿ-ರಾಮುಲು ಬಿಜೆಪಿಯ ಅಧಿಕಾರದ ಅಂಗಳದಲ್ಲಿ ಓಡಾಡುವುದು ಸುಲಭವಾಯಿತು. ಇವರ ಸಹಕಾರದಿಂದಾಗಿಯೇ ಮುಂದೆ 2006ರಲ್ಲಿ ಯಡಿಯೂರಪ್ಪನವರು ಸಮ್ಮಿಶ್ರ ಸರ್ಕಾರವನ್ನು ಕೆಡವಲು, ಶಾಸಕರನ್ನು ಖರೀದಿಸಲು, ರೆಸಾರ್ಟ್ ರಾಜಕಾರಣ ಮಾಡಲು, ಸರ್ಕಾರ ರಚಿಸಲು ಧೈರ್ಯ ಮತ್ತು ಬಲ ಪಡೆದುಕೊಂಡರು.

ನೇರ ಪ್ರತಿಫಲ

ದಕ್ಷಿಣ ಭಾರತದ ಹೆಬ್ಬಾಗಿಲಿಗೆ ಬಿಜೆಪಿಗೆ ಪ್ರವೇಶ ದೊರಕಿಸಿದ ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನೇ ಪಡೆದರು ರೆಡ್ಡಿ ಸೋದರರು ಹಾಗೂ ಮಿತ್ರ ಶ್ರೀರಾಮುಲು. ಇದರ ಫಲವಾಗಿ ಬಳ್ಳಾರಿಯ ಸಾಮಾನ್ಯ ಪೇದೆಯ ಪುತ್ರ ಜನಾರ್ದನ ರೆಡ್ಡಿ ವಿಧಾನಪರಿಷತ್ ಸದಸ್ಯನಾಗುವಂತಾಯಿತು. ಅಣ್ಣ ಕರುಣಾಕರ ರೆಡ್ಡಿ, ತಮ್ಮ ಸೋಮಶೇಖರ ರೆಡ್ಡಿ, ಮಿತ್ರ ಶ್ರೀರಾಮುಲು ಸಚಿವರಾಗುವಂತಾಯಿತು. ಅಕ್ರಮ ಗಣಿಗಾರಿಕೆಗೆ ಸರಕಾರದ ಸಕ್ರಮದ ಮುದ್ರೆ ಬೀಳುವಂತಾಯಿತು. ಇಡೀ ದೇಶದ ರಾಜಕಾರಣವನ್ನೇ ಬಳ್ಳಾರಿ ರೆಡ್ಡಿಗಳು ತಮ್ಮ ಬೆರಳ ತುದಿಯಲ್ಲಿ ಆಡಿಸುವಂತಾಯಿತು.

ಜೆಡಿಎಸ್‌ಗೆ ಆಘಾತ

ರೆಡ್ಡಿಗಳ ರಾಜಕೀಯ ಮಹತ್ವಕಾಂಕ್ಷೆ, ಹಣದ ಪ್ರಭಾವ ಮತ್ತು ಹೋಗುತ್ತಿರುವ ವೇಗ ಕಂಡು ಬೆಚ್ಚಿಬಿದ್ದ ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಬ್ರೇಕ್ ಹಾಕಲು ಯತ್ನಿಸಿದರು. ಆದರೆ, ರೆಡ್ಡಿ ಇಂಜಿನ್‌ನ ವೇಗದ ಮುಂದೆ ಬ್ರೇಕ್ ಫೇಲ್ ಆಯಿತು. ರೆಡ್ಡಿ-ಯಡ್ಡಿ ಗುಂಪಿಗೆ ಅಧಿಕಾರ ಬಿಟ್ಟುಕೊಟ್ಟರೆ, ಇಬ್ಬರೂ ಸೇರಿ ಜೆಡಿಎಸ್ ಮುಗಿಸಿಬಿಡುತ್ತಾರೆಂಬ ಧಾವಂತದಿಂದ ಎಚ್.ಡಿ. ದೇವೆಗೌಡರು ಕರಾರಿನ ಪ್ರಕಾರ ಬಿಜೆಪಿಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಲು ನಿರಾಕರಿಸಿದರು. ವಿಧಾನಸೌಧದಲ್ಲಿ ಬಹುಮತ ಸಾಬೀತುಪಡಿಸಲು ಯಡಿಯೂರಪ್ಪ ವಿಫಲರಾಗುವ ಮೂಲಕ 2008ರಲ್ಲಿ ಜೆಡಿಎಸ್-ಬಿಜೆಪಿಯ ಮೊದಲ ಸಮ್ಮಿಶ್ರ ಸರ್ಕಾರ ಮುರಿದುಬಿತ್ತು.

ಕರ್ನಾಟಕ ಗೆದ್ದ ಬಿಜೆಪಿ

ಕೆರಳಿದ ರೆಡ್ಡಿ-ಯಡ್ಡಿ ಈ ವೈಫಲ್ಯವನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಂಡರು. ಅನುಕಂಪದ ಅಲೆಯ ಜೊತೆಗೆ ಅಪಾರ ಹಣವನ್ನೂ ಬಳಸಿಕೊಂಡು, 2008ರ ವಿಧಾನಸಭಾ ಚುನಾವಣೆಯಲ್ಲಿ ಸರಳ ಬಹುಮತದ ಹತ್ತಿರಕ್ಕೆ ಬಂದುಬಿಟ್ಟರು. ಕೇವಲ ಮೂರೇ ಸ್ಥಾನ ಕೊರತೆಯಿದ್ದ ಬಿಜೆಪಿ ಆಪರೇಶನ್ ಕಮಲ ಪರಿಚಯಿಸುವ ಮೂಲಕ ಸ್ವಂತ ಶಕ್ತಿಯಿಂದ ಬಹುಮತ ಗಳಿಸಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದುಬಿಟ್ಟಿತು.

ನಿರೀಕ್ಷೆಯಂತೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದರು. ತಮ್ಮ ಗೆಲುವಿಗೆ ನೇರ ಕಾರಣಕರ್ತರಾದ ಜನಾರ್ದನ ರೆಡ್ಡಿ, ಅವರ ಸೋದರ ಕರುಣಾಕರ ರೆಡ್ಡಿ ಹಾಗೂ ಮಿತ್ರ ಬಿ. ಶ್ರೀರಾಮುಲು ಅವರಿಗೆ ಸಚಿವ ಸ್ಥಾನಗಳನ್ನು ನೀಡಿದರು. ರೆಡ್ಡಿ ಅವರ ಮತ್ತೊಬ್ಬ ಸೋದರ ಸೋಮಶೇಖರ ರೆಡ್ಡಿ ಕೆಎಂಎಫ್ ಅಧ್ಯಕ್ಷರಾದರು. ರೆಡ್ಡಿ ಅವರ ಹಿಂಬಾಲಕರು ಹಾಗೂ ಮಿತ್ರರು ಕೂಡಾ ಸಾಕಷ್ಟು ರಾಜಕೀಯ ಅವಕಾಶಗಳನ್ನು ಗಿಟ್ಟಿಸುವುದು ಸಾಧ್ಯವಾಯಿತು. ಅದು ಜನಾರ್ದನ ರೆಡ್ಡಿ ಅವರ ರಾಜಕೀಯ ಮತ್ತು ವಾಣಿಜ್ಯ ಬೆಳವಣಿಗೆಯ ಉನ್ನತ ಕಾಲ.

ಬಿಎಸ್‌ವೈ ಸ್ವಯಂಕೃತಾಪರಾಧ

ಮುಂದಿನ ಬೆಳವಣಿಗೆಗಳು ಬಹುತೇಕರಿಗೆ ಗೊತ್ತೇ ಇವೆ. ತನ್ನನ್ನು ಅಧಿಕಾರಕ್ಕೆ ತಂದ ರೆಡ್ಡಿಗಳನ್ನೇ ಯಡಿಯೂರಪ್ಪ ಕಡೆಗಣಿಸಿದರು. ತಮ್ಮ ಆಪ್ತೆ ಶೋಭಾ ಕರಂದ್ಲಾಜೆ ಅವರಿಗೆ ಹೆಚ್ಚಿನ ಆದ್ಯತೆ ಕೊಟ್ಟರು. ಇದು ರೆಡ್ಡಿಗಳನ್ನು ಕನಲಿಸಿತು. ಅಲ್ಲಿಂದ ಶುರುವಾದ ಆಂತರಿಕ ಬಂಡಾಯ ಪಕ್ಷದಲ್ಲಿ ಯಡಿಯೂರಪ್ಪನವರ ಮಹತ್ವವನ್ನು ಕುಗ್ಗಿಸಿತು. ಕರ್ನಾಟಕದಲ್ಲಿ ಪಕ್ಷವನ್ನು ಮೊದಲ ಬಾರಿ ಅಧಿಕಾರಕ್ಕೆ ತಂದ ವ್ಯಕ್ತಿ ಎಂದು ಯಡಿಯೂರಪ್ಪನವರನ್ನು ಗೌರವಿಸುತ್ತಿದ್ದ ದಿಲ್ಲಿಯ ಬಿಜೆಪಿ ದೊರೆಗಳು, ಮೊದಲ ಬಾರಿ ಪರ್ಯಾಯ ನಾಯಕತ್ವದ ಹುಡುಕಾಟಕ್ಕೆ ಮುಂದಾದರು. ಯಡಿಯೂರಪ್ಪನವರ ವಿರುದ್ಧದ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಅಂಗೀಕರಿಸಲ್ಪಟ್ಟವು. ಇಂತಹ ಎಲ್ಲಾ ಆಂತರಿಕ ಮತ್ತು ಬಾಹ್ಯ ವಿರೋಧಗಳು 2011ರಲ್ಲಿ ಬಿ.ಎಸ್. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಸಿ ಜೈಲಿಗೆ ಅಟ್ಟಿದವು.

ಜಂಟಿ ಅಧಃಪತನ ಶುರು

ಅಲ್ಲಿಂದ ರೆಡ್ಡಿಗಳ ಅಧಃಪತನವೂ ಶುರುವಾಯಿತು. ರೆಡ್ಡಿ ಮತ್ತು ಯಡ್ಡಿ ಇಬ್ಬರನ್ನೂ ಅಧಿಕಾರ ರಾಜಕಾರಣದಿಂದ ದೂರ ಇಡದಿದ್ದರೆ, ಬಿಜೆಪಿ ಕೂಡಾ ಕಾಂಗ್ರೆಸ್‌ನಂತಾಗುತ್ತದೆ ಎಂಬ ಎಚ್ಚರಿಕೆ ವಹಿಸಿದ ದಿಲ್ಲಿ ದೊರೆಗಳು, ಬೇರೆಯದೇ ಆದ ಕಾರ್ಯತಂತ್ರ ರೂಪಿಸಲು ಮುಂದಾದರು. ಪಕ್ಷದ ಧ್ಯೇಯ ಬಿಟ್ಟು ಅಧಿಕಾರ ಹಿಡಿಯುವುದನ್ನೇ ಮುಖ್ಯವಾಗಿ ಪರಿಗಣಿಸದಿರಲು ನಿರ್ಧರಿಸಿದರು. ಇದರಿಂದಾಗಿ ಬಿಎಸ್‌ವೈ ಮೂಲೆಗುಂಪಾದರು. ಜನಾರ್ದನ ರೆಡ್ಡಿ ವಿರುದ್ಧ ಗಣಿ ಅಕ್ರಮದ ತನಿಖೆಗಳು ಪ್ರಾರಂಭವಾದವು. ಯಾವಾಗ ರೆಡ್ಡಿ ಹೆಸರು ಅಕ್ರಮ ಗಣಿಗಾರಿಕೆ ಜೊತೆ ಗುರುತಿಸಲ್ಪಟ್ಟಿತೋ, ಅಣ್ಣ ಕರುಣಾಕರ ರೆಡ್ಡಿ ಹಿಂದೆ ಸರಿದರು. ಸೋಮಶೇಖರ ರೆಡ್ಡಿ ಮತ್ತು ಶ್ರೀರಾಮುಲು ಪಕ್ಕಕ್ಕೆ ಸರಿದು ರೆಡ್ಡಿ ಅಧಃಪತನವನ್ನು ಮೌನವಾಗಿ ನೋಡುವಂತಾಯಿತು.

ಕೋರ್ಟ್ ಕೋಟಲೆ ಶುರು

ಜನಾರ್ದನ ರೆಡ್ಡಿ ಅವರ ಅಕ್ರಮ ಗಣಿಗಾರಿಕೆಯನ್ನು ಅಂಕಿಅಂಶಗಳ ಸಮೇತ ಮಾಧ್ಯಮಗಳ ಮುಂದಿಡಲು ಮುಂದಾಗಿದ್ದು ಸಮಾಜ ಪರಿವರ್ತನಾ ಸಮುದಾಯದ ಸಂಚಾಲಕ ಎಸ್.ಆರ್. ಹಿರೇಮಠ್. ಅಕ್ರಮ ಗಣಿಗಾರಿಕೆ ಮತ್ತು ಪರಿಸರ ಲೂಟಿಯನ್ನು ಅಂಕಿಅಂಶಗಳ ಸಮೇತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಮೂಲಕ, ಕೋರ್ಟಿನಲ್ಲಿ ದಾವೆ ಹೂಡಿದ ಹಿರೇಮಠ್, ಜನಾರ್ದನ ರೆಡ್ಡಿ ನ್ಯಾಯಾಲಯ ಮತ್ತು ಜೈಲಿನ ನಡುವೆ ಅಲೆದಾಡುವಂತೆ ಮಾಡಿದರು.ಇದಕ್ಕೆ ಪೂರಕವಾಗಿ ಅಂದಿನ ಲೋಕಾಯುಕ್ತ ಸಂತೋಷ್ ಹೆಗ್ಡೆಯವರು 2011ರಲ್ಲಿ, ಅಕ್ರಮ ಗಣಿಗಾರಿಕೆ, ತೆರಿಗೆ ವಂಚನೆ, ಅಧಿಕಾರ ದುರುಪಯೋಗವನ್ನು ಎಳೆ ಎಳೆಯಾಗಿ ಬಿಡಿಸಿಡುವ ಲೋಕಾಯುಕ್ತ ವರದಿಯನ್ನು ಪ್ರಕಟಿಸಿದರು. ಇದೆಲ್ಲದರ ಫಲವಾಗಿ ಸೆಪ್ಟೆಂಬರ್ 5, 2011ರಂದು ಸಿಬಿಐನಿಂದ ಜನಾರ್ದನ ರೆಡ್ಡಿ ಬಂಧನವಾಯಿತು. ಒಂದು ವರ್ಷ ಕಾಲ ಜೈಲಿನಲ್ಲಿ ಕೊಳೆಯುವಂತಾಯಿತು. ಬಳ್ಳಾರಿಗೆ ಬರದಂತೆ ಸುಪ್ರೀಂ ಕೋರ್ಟಿನಿಂದ ಬರೆಯೂ ಬಿತ್ತು.

ಮುಗಿಬಿದ್ದ ಕಾಂಗ್ರೆಸ್

ಇನ್ನೊಂದು ಕಡೆ ರೆಡ್ಡಿ ವಿರುದ್ಧ ಕಾಂಗ್ರೆಸ್ ಮುಗಿಬಿತ್ತು. ರಾಜ್ಯದ ನೈಸರ್ಗಿಕ ಸಂಪತ್ತನ್ನು ಲೂಟಿಗೈದವರ ಪರ ನಿಂತು ರಾಜಕೀಯ ಕ್ಷೇತ್ರವನ್ನು ಕಲುಷಿತಗೊಳಿಸಿ ಅಟ್ಟಹಾಸ ಮೆರೆಯುತ್ತಿದ್ದ ರೆಡ್ಡಿ ಅಕ್ರಮ ಹಾಗೂ ಬಿಜೆಪಿಯ ಅನೈತಿಕ ನಂಟಿನ ವಿರುದ್ಧ ಜಾಗೃತಿ ಮೂಡಿಸಲು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರು ಮುಂದಾದರು. 2013ರಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಕಾರಣರಾದರು. ನಿರೀಕ್ಷೆಯಂತೆ ಸಿದ್ದರಾಮಯ್ಯ ಮುಖ್ಯಮಂತ್ರಿಯೂ ಆಗುವ ಮೂಲಕ ಬಿಜೆಪಿ ಮೂಲೆಗುಂಪಾಯಿತು. ಯಡ್ಡಿ ಮತ್ತು ರೆಡ್ಡಿ ಕಾನೂನು ಕ್ರಮದಲ್ಲಿ ನರಳುವಂತಾಯಿತು.

ಸಮಾನ ಸಂತ್ರಸ್ತರು

ಈ ನಡುವೆ 2019ರಲ್ಲಿ ಬಿ.ಎಸ್. ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾದರೂ ಅವರಲ್ಲಿ ಮೊದಲಿನ ಖದರು ಉಳಿದಿರಲಿಲ್ಲ. ಅಂತಹ ನಿಬಂಧನೆಗಳನ್ನು ವಿಧಿಸಿಯೇ ಅವರಿಗೆ ಮುಖ್ಯಮಂತ್ರಿ ಹುದ್ದೆಯನ್ನು ದಯಪಾಲಿಸಿದ್ದರು ದಿಲ್ಲಿ ದೊರೆಗಳು. ಮುಂದೆ ಒಂದೂವರೆ ವರ್ಷದಲ್ಲಿ, ಯಾವುದೇ ಕಾರಣಗಳನ್ನು ನೀಡದೇ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಸಲಾಯಿತು. ಸಾವಿರಾರು ಕೋಟಿ ರೂಪಾಯಿಗಳ ಆಸ್ತಿಗೆ ಒಡೆಯನಾಗಿದ್ದರೂ ಜನಾರ್ದನ ರೆಡ್ಡಿ ಹೇಗೆ ಅನಾಥರಾಗಿದ್ದರೋ, ಅದೇ ರೀತಿ ತಮ್ಮದೇ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಯಡಿಯೂರಪ್ಪ ಕೂಡಾ ಅನಾಥರಾಗುವಂತಾಯಿತು.ಇದೆಲ್ಲ ಆಗಿ ಹತ್ತು ವರ್ಷಗಳೇ ಆಗಿಹೋಗಿವೆ. ರೆಡ್ಡಿ ಮತ್ತು ಯಡ್ಡಿ- ಇಬ್ಬರೂ ಸಮಾನ ಸಂತ್ರಸ್ತರಾಗಿದ್ದಾರೆ. ಇಬ್ಬರಿಗೂ ಬಿಜೆಪಿ ಮೇಲೆ ಸಿಟ್ಟಿದೆ. ಇಬ್ಬರೂ ತಮ್ಮ ತಪ್ಪುಗಳಿಂದ ಪಾಠ ಕಲಿತಿದ್ದಾರೆ. ತಾವಿಲ್ಲದೇ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬಲ್ಲೆವು ಎಂಬ ಹಮ್ಮಿನಲ್ಲಿರುವ ಬಿಜೆಪಿಗೆ ಪಾಠ ಕಲಿಸುವ, ಪಕ್ಷವನ್ನು ಮತ್ತೆ ತಮ್ಮ ಮರ್ಜಿಗೆ ತಂದುಕೊಳ್ಳುವ ಜಿದ್ದು ಇಬ್ಬರಲ್ಲಿಯೂ ಇದೆ. ಯಾವ ಕೆಲಸವನ್ನು ಜೆಡಿಎಸ್ ಪಕ್ಷ ಮಾಡುತ್ತಿದೆಯೋ, ಅಂಥದೇ ಕೆಲಸವನ್ನು ತಾವೇ ಮಾಡುವ ಮೂಲಕ, ಅತಂತ್ರ ರಾಜಕಾರಣದ ಅವಕಾಶಗಳನ್ನು ಬಳಸಿಕೊಳ್ಳಲು ಈ ಸಮಾನ ಸಂತ್ರಸ್ತರು ನಿರ್ಧರಿಸಿದಂತಿದೆ.

ಹೊಸ ಪಕ್ಷ ಹೊಸ ನಡೆ

ಹೀಗಾಗಿ ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್ಪಿಪಿ) ಎಂಬ ಹೊಸ ಪಕ್ಷ ಸ್ಥಾಪಿಸಿ ವಿಧಾನಸಭಾ ಚುನಾವಣೆಗೆ ಸಿದ್ಧತೆಗಳನ್ನು ನಡೆಸಿದ್ದಾರೆ. ಹಿನ್ನೆಲೆಯಲ್ಲಿ ಯಡಿಯೂರಪ್ಪ ನಿಂತಿದ್ದಾರೆ. ತಾವು ಖುದ್ದು ಗಂಗಾವತಿಯಿಂದ ಸ್ಪರ್ಧಿಸುವುದಾಗಿ ರೆಡ್ಡಿ ಹೇಳಿರುವುದಲ್ಲದೇ ಭರ್ಜರಿ ಸಿದ್ಧತೆಯನ್ನೂ ನಡೆಸಿದ್ದಾರೆ. ಹನುಮನುದಿಸಿದ ಅಂಜನಾದ್ರಿ ಇರುವ ಗಂಗಾವತಿಯಲ್ಲಿ ಗೆಲ್ಲುವ ಮೂಲಕ ರಾಮನ ಪಕ್ಷ ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ಪಾಠ ಕಲಿಸಬೇಕೆಂಬ ಜಿದ್ದು ಜನಾರ್ದನ ರೆಡ್ಡಿಯದು. ಹೊಸ ಪಕ್ಷ ರಾಜ್ಯ ರಾಜಕಾರಣದಲ್ಲಿ ವಿಚಿತ್ರ ತಳಮಳವನ್ನು ಸೃಷ್ಟಿಸಲಿದೆ. ಇದರ ನೇರ ಹೊಡೆತ ಜೆಡಿಎಸ್ ಹಾಗೂ ಕಾಂಗ್ರೆಸ್ಗೆ ಬೀಳಲಿದ್ದು, ಬಿಜೆಪಿಯ ಅಸಮಾಧಾನಿತರು ರೆಡ್ಡಿ ಪಕ್ಷದ ಮೂಲಕ ಪುನರ್ಜನ್ಮ ಪಡೆಯುವ ನಿರೀಕ್ಷೆಯಿದೆ. ವಿಧಾನಸಭೆ ಚುನಾವಣೆ ಫಲಿತಾಂಶ ಈಗಲೂ ಅತಂತ್ರವಾಗಿಯೇ ಇರುವುದರಿಂದ, ಮುಂದೆ ಕಾಂಗ್ರೆಸ್ ಆಗಲಿ, ಬಿಜೆಪಿಯಾಗಲಿ ಅಧಿಕಾರಕ್ಕೆ ಬಂದರೆ, ರೆಡ್ಡಿ ಪಕ್ಷದ ಮೈತ್ರಿ ಅವರಿಗೆ ಅನಿವಾರ್ಯವಾಗುವ ಸಾಧ್ಯತೆಗಳಿವೆ. ಅಂತಹ ಸಾಧ್ಯತೆಯನ್ನು ಸೃಷ್ಟಿಸುವುದೇ ಜನಾರ್ದನ ರೆಡ್ಡಿ ಅವರ ನೂತನ ಪಕ್ಷದ ಉದ್ದೇಶ. ಅದು ಯಡಿಯೂರಪ್ಪನವರ ಆಕಾಂಕ್ಷೆ ಕೂಡಾ – ಚಾಮರಾಜ ಸವಡಿ | ಕೊಪ್ಪಳ

ಜನಾರ್ದನ ರೆಡ್ಡಿ ಎಂಬ ಚಾಣಾಕ್ಷ, ಅಷ್ಟಕ್ಕೂ ಯಾರು ಈ ಜನಾರ್ದನ ರೆಡ್ಡಿ ಎಂದು ಕೆದಕಿದರೆ ದೊರೆಯುವ ವಿವರ ಹೀಗಿದೆ: 1967ರಲ್ಲಿ ಬಳ್ಳಾರಿಯ ಸಾಮಾನ್ಯ ಕುಟುಂಬದಲ್ಲಿ, ಪೊಲೀಸ್ ಕಾನ್ಸ್ಟೇಬಲ್ ಮಗನಾಗಿ ಜನಿಸಿದ ಜನಾರ್ದನ ರೆಡ್ಡಿ ಓದಿದ್ದು ಪಿಯುಸಿ. ಆದರೆ, ವಿದ್ಯೆಗಿಂತ ವ್ಯಾಪಾರ ಹೆಚ್ಚು ಆಸಕ್ತಿ ಮೂಡಿಸಿತ್ತು. ಹೀಗಾಗಿ, ಶೈಕ್ಷಣಿಕ ಓದು ಕೈಬಿಟ್ಟ ಜನಾರ್ದನ ರೆಡ್ಡಿ ಎನೋಬಲ್ ಇಂಡಿಯಾ ಎಂಬ ಫೈನಾನ್ಸ್ ಕಂಪನಿ ತೆರೆದರು. ಅದನ್ನು ಅತ್ಯಂತ ವೃತ್ತಿಪರವಾಗಿ ಬೆಳೆಸಿದರಲ್ಲದೇ ಅದನ್ನು ದಕ್ಷಿಣ ಭಾರತದಾದ್ಯಂತ ವಿಸ್ತರಿಸಿದರು. ಸಂಸ್ಥೆಯನ್ನು ಅಧಿಕೃತವಾಗಿ ಸ್ಥಗಿತಗೊಳಿಸುವ ಸಮಯದಲ್ಲಿ ಎನೋಬಲ್ ಇಂಡಿಯಾ ಸಂಸ್ಥೆ ವಾರ್ಷಿಕ ರೂ.350 ಕೋಟಿ ವಹಿವಾಟುಳ್ಳ ಹಣಕಾಸು ಸಂಸ್ಥೆಯಾಗಿತ್ತು. ಅಷ್ಟೇ ಅಲ್ಲ, ಶಿಸ್ತಿನ ಸಂಸ್ಥೆ ಎಂದು ಆರ್‌ಬಿಐನಿಂದ ಮೆಚ್ಚುಗೆ ಕೂಡ ಪಡೆದಿತ್ತು.

ಹಣಕಾಸು ಕ್ಷೇತ್ರದಲ್ಲಿ ಗಳಿಸಿದ ಯಶಸ್ಸು ಮತ್ತು ಅನುಭವ ಜನಾರ್ದನ ರೆಡ್ಡಿ ಗಮನವನ್ನು ರಾಜಕೀಯದತ್ತ ಸೆಳೆಯಿತು. ಯಾವುದೇ ರಂಗದಲ್ಲಿ ಉನ್ನತ ಸಾಧನೆ ಮಾಡಲು ರಾಜಕೀಯ ನಂಟು ಸುಲಭದ ದಾರಿ ಎಂಬುದನ್ನು ಅಷ್ಟೊತ್ತಿಗೆ ಅವರು ಕಂಡುಕೊಂಡಿದ್ದರು. ಯಾವಾಗ ಬಳ್ಳಾರಿಗೆ ಬಿಜೆಪಿಯ ಸುಷ್ಮಾ ಸ್ವರಾಜ್ ಕಾಲಿಟ್ಟರೋ, ಅಂದಿನಿಂದ ರೆಡ್ಡಿಗಳ ಅದೃಷ್ಟ ಖುಲಾಯಿಸಿತು.ಬಿಜೆಪಿಯ ದಿಲ್ಲಿ ನಾಯಕರ ನಿರಂತರ ಸಂಪರ್ಕದ ಫಲವಾಗಿ 2001ರಲ್ಲಿ ಓಬಳಾಪುರಂ ಮೈನಿಂಗ್ ಕಂಪನಿ ತೆರೆದು ಕಬ್ಬಿಣ ಅದಿರಿನ ಗಣಿಗಾರಿಕೆ ಗುತ್ತಿಗೆ ಪಡೆದರು. 2004ರಲ್ಲಿ ಅದನ್ನು ಪಕ್ಕದ ಆಂಧ್ರಪ್ರದೇಶದ ಅನಂತಪುರಕ್ಕೂ ವಿಸ್ತರಿಸಿದರು. ಆಂಧ್ರದ ಕಡಪದಲ್ಲಿ ಬ್ರಹ್ಮಣಿ ಇಂಡಸ್ಟ್ರಿ ಎಂಬ ಉಕ್ಕಿನ ಕಾರ್ಖಾನೆ ಆರಂಭಿಸಿದರು. ಕರ್ನಾಟಕ ಮತ್ತು ಆಂಧ್ರದ ಅದಿರಿನ ಗಡಿಭಾಗವನ್ನು ಅಕ್ರಮ ಗಣಿಗಾರಿಕೆಯ ಕೇಂದ್ರವನ್ನಾಗಿ ಮಾಡಿಕೊಂಡು ಭಾರೀ ಪ್ರಮಾಣದಲ್ಲಿ ಅದಿರು ಹೊರತೆಗೆದರು.

ಆಗ ಚೀನಾದಲ್ಲಿ ಒಲಂಪಿಕ್ಸ್ ಆಯೋಜನೆಯಾಗಿತ್ತು. ದೊಡ್ಡ ಪ್ರಮಾಣದ ನಿರ್ಮಾಣ ಚಟುವಟಿಕೆಗಳು ಅಲ್ಲಿ ನಡೆಯುತ್ತಿದ್ದವು. ಚೀನಾಕ್ಕೆ ಕಬ್ಬಿಣದ ಅದಿರು ಸರಬರಾಜಿನ ಗುತ್ತಿಗೆ ಪಡೆದ ಜನಾರ್ದನ ರೆಡ್ಡಿ, ಚಾಲ್ತಿಯಲ್ಲಿದ್ದ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಭಾರೀ ಪ್ರಮಾಣದಲ್ಲಿ ಅದಿರನ್ನು ರಫ್ತು ಮಾಡತೊಡಗಿದರು. ದೂಳೆಂಬುದು ದುಡ್ಡು ಉತ್ಪಾದಿಸುವ ಯಂತ್ರದಂತಾಯಿತು. 2006ರಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಕೆಡವಿ, ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಜನಾರ್ದನ ರೆಡ್ಡಿ ಅವರೇ ಪ್ರಮುಖ ವ್ಯಕ್ತಿ. ಅಧಿಕಾರಕ್ಕಾಗಿ ಹಂಬಲಿಸುತ್ತಿದ್ದ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಅವರಿಗೆ ರೆಡ್ಡಿಯಂಥವರ ಬೆಂಬಲ ಅನಿವಾರ್ಯವಾಗಿತ್ತು. ರೆಡ್ಡಿಗೆ ಯಡಿಯೂರಪ್ಪನವರಂತಹ ರಾಜಕೀಯ ವ್ಯಕ್ತಿಯ ನಂಟು ಬೇಕಿತ್ತು. ಒಬ್ಬರ ಹಣ, ಮತ್ತೊಬ್ಬರ ರಾಜಕೀಯ ಪ್ರಭಾವ ಒಟ್ಟಾಗಿ, ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದ ರುಚಿ ನೋಡುವಂತಾಯಿತು. ದಕ್ಷಿಣ ಭಾರತವನ್ನು ಪ್ರವೇಶಿಸಲು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದ ಬಿಜೆಪಿಯ ದಿಲ್ಲಿ ದೊರೆಗಳು ಕೂಡಾ ಈ ಅನೈತಿಕ ಸಂಬಂಧವನ್ನು ಬೆಂಬಲಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ರೆಡ್ಡಿ ಪರ್ವ ಪ್ರಾರಂಭವಾಗಿಬಿಟ್ಟಿತು.

ಕರ್ನಾಟಕದಲ್ಲಿ ಯಡಿಯೂರಪ್ಪನವರನ್ನು ಹಿಡಿದುಕೊಂಡು ಅನುಕೂಲ ಮಾಡಿಕೊಂಡ ಮಾದರಿಯಲ್ಲಿಯೇ, ಪಕ್ಷದ ಅವಿಭಜಿತ ಆಂಧ್ರಪ್ರದೇಶದಲ್ಲಿ ವೈ.ಎಸ್. ರಾಜಶೇಖರರೆಡ್ಡಿ ಅವರನ್ನು ಬೆಂಬಲಿಸುವ ಮೂಲಕ ಜನಾರ್ದನ ರೆಡ್ಡಿ ಅಲ್ಲಿ ಕೂಡಾ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದರು. ದುಡ್ಡೆಂಬುದು ತುಂಗಭದ್ರೆಯ ಪ್ರವಾಹದ ನೀರಿಗಿಂತ ಕಡೆಯಾಗಿ ಹರಿದುಬರತೊಡಗಿತು. ಅದರ ಪರಿಣಾಮವಾಗಿ ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಮುಂದಿನ ಹತ್ತು ವರ್ಷ, ರೆಡ್ಡಿ ಆಡಿದ್ದೇ ಆಟವಾಯಿತು

Leave a Reply

Your email address will not be published.