• Wed. May 31st, 2023

M-News

Mahapapi News Karnataka

ಬಸವೇಶ್ವರ ಆರ್ಥಿಕ ವಿಕಾಸ ಮಹಾಮಂಡಳ ಘೋಷಣೆ

ByRahul Krantikari

Mar 12, 2023

ಪತ್ರಿಕಾ ಪ್ರಕಟಣೆ ಕೃಪೆಗಾಗಿ
ದಿನಾಂಕ 09-02-2023

ಮಾನ್ಯ ಶ್ರೀ ಸಂಪಾದಕರು/ ವರದಿಗಾರರು.
ದಿನ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮ ಬೀದರ.

ಮಹಾರಾಷ್ಟ್ರ ಸರಕಾರ ಲಿಂಗಾಯತ ಸಮಾಜಕ್ಕಾಗಿ, “ಬಸವೇಶ್ವರ ಆರ್ಥಿಕ ವಿಕಾಸ ಮಹಾಮಂಡಳ ಘೋಷಣೆ”: ಈ ಎರಡು ನೂರು ಕೋಟಿ ಅನುದಾನ ನೀಡಲು ಇಂದಿನ ಮಹಾರಾಷ್ಟ್ರ ಬಜೆಟ್ ದಲ್ಲಿ ಪ್ರಸ್ತಾವನೆ:

ಮಹಾರಾಷ್ಟ್ರ ಸರಕಾರ, ಮಾನ್ಯ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಏಕನಾಥ ಶಿಂದೆ, ಮಾನ್ಯ ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಸನ್ಮಾನ್ಯ ಶ್ರೀ ದೇವಿಂದ್ರ ಫಡನವಿಸ್ , ಲಿಂಗಾಯತ ಧರ್ಮ ಶಾಸಕ ಸನ್ಮಾನ್ಯ ಶ್ರೀ ವಿನಯ ಕೊರೆ ಹಾಗೂ ಪ್ರಯತ್ನ ಮಾಡಿದ್ದ ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ಅಧ್ಯಕ್ಷ ಶ್ರೀ ಅವಿನಾಶ ಭೋಸ್ವಿಕರ ಅವರಿಗೆ ಧನ್ಯವಾದ.

ದಿನಾಂಕ 29ಜನವರಿ 2023 ಮುಂಬೈ ಲಿಂಗಾಯತ ಧರ್ಮದ ಮಾನ್ಯತೆ ರಾಲಿಯಲ್ಲಿ ಸರಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ಸುಮಾರು ಹತ್ತು ಬೇಡಿಕೆ ಇಟ್ಟಿದ್ದು, ಅವಗಳಲ್ಲಿ 6 ಬೇಡಿಕೆ ಕೂಡಲೇ ಈಡೇರಿಸುವುದಾಗಿ ಸರಕಾರ ಒಪ್ಪಿಕೊಂಡಿತ್ತು. ಸಮಿತಿ ಜೊತೆ ಮಾನ್ಯ ಉಪಮುಖ್ಯಮಂತ್ರಿ ಸನ್ಮಾನ್ಯ ಶ್ರೀ ದೆವಿಂದ್ರ ಫಡನ್ವಿಸ್ ಕೆಲವು ದಿವಸ ಮೊದಲು ಸಭೆ ಸೇರಿ ಸುಮಾರು ಮೂರು ಘಂಟೆ ಕಾಲ ಸುಧೀರ್ಘ ಚರ್ಚೆ ಮಾಡಿದ್ದರು. ನಾವೆಲ್ಲರೂ ಎಲ್ಲ ಬೇಡಿಕೆ ಬಗ್ಗೆ ಮಾಹಿತಿ ಕೊಟ್ಟು,ಮಹಾರಾಷ್ಟ್ರ ಲಿಂಗಾಯತರ ಸ್ಥಿತಿ ಗತಿ, ಲಿಂಗಾಯತ ಧರ್ಮ ಮಾನ್ಯತೆ, ಮೀಸಲಾತಿ, ವಿಶ್ವವಿಖ್ಯಾತ ಬಸವ ತತ್ವ ಸಿದ್ಧಾಂತಗಳನ್ನು ತಿಳಿಸಿ ಹೇಳಿದ್ದೆವು. ಅಂದೆ ಅವರು ನಮ್ಮ ಮನವಿ ಪುರಸ್ಕಾರ ಮಾಡಿದ್ದರು.

ನಮ್ಮ ಮುಂಬೈ ಲಿಂಗಾಯತ ಧರ್ಮದ ರಾಲಿಯಲ್ಲಿ ಸರಕಾರದ ಪ್ರತಿನಿಧಿ ಆಗಿ ಮಹಾರಾಷ್ಟ್ರ ಮಾನ್ಯ ಶಾಸಕರು ಲಿಂಗಾಯತ ಧರ್ಮದ ನಾಯಕರು ಆದ ಸನ್ಮಾನ್ಯ ಶ್ರೀ ವಿನಯ ಕೊರೆ ಅವರು ಭಾಗವಹಿಸಿ ನೆರೆದ ಸಹಸ್ರಾರು ಜನರ ಎದುರು ಸರಕಾರದ ನಿಲುವು ಘೋಷಣೆ ಮಾಡಿದ್ದರು.

ಅದರಂತೆ ಇಂದು ಮಹಾರಾಷ್ಟ್ರ ಸರಕಾರದ ವಾರ್ಷಿಕ ಆಯವ್ಯಯ ಮಂಡನೆಯಲ್ಲಿ ಲಿಂಗಾಯತ ಸಮುದಾಯ ಸಲುವಾಗಿ “ಬಸವೇಶ್ವರ ಆರ್ಥಿಕ ವಿಕಾಸ ಮಹಾಮಂಡಳ” ಘೋಷಣೆ ಮಾಡಿ ಸುಮಾರು 200 ಕೋಟಿ ಅನುದಾನ ನೀಡಿದ್ದು ಸಂಪೂರ್ಣ ಲಿಂಗಾಯತ ಧರ್ಮೀಯರಿಗೆ ಸಂತೋಷ ತಂದು ಕೊಟ್ಟಿದೆ.

ಕರ್ನಾಟಕ ದಿಂದ ಸಹಸ್ರಾರು ಸಂಖ್ಯೆಯಲ್ಲಿ ಮುಂಬೈ ರಾಲಿಯಲ್ಲಿ ಭಾಗವಹಿಸಿ ನಾವು ಮಹಾರಾಷ್ಟ್ರ ಲಿಂಗಾಯತ ಸಮನ್ವಯ ಸಮಿತಿ ಬೆಂಬಲ ಕೊಟ್ಟಿದ್ದು ಫಲ ನೀಡಿತ್ತು. ಮುಖ್ಯವಾಗಿ ಸಾನಿಧ್ಯ ವಹಿಸಿದ್ದ ಪೂಜ್ಯ ಶ್ರೀ ಚನ್ನಬಸವಾನಂದ ಮಹಾಸ್ವಾಮೀಜಿ ಜಗದ್ಗುರು ಕುಂಬೊಳಗೋಡ ಬೆಂಗಳೂರು, ಉಪಸ್ಥಿತರಿದ್ದ ಪೂಜ್ಯ ಶ್ರೀ ಸತ್ಯದೆವಿ ಮಾತಾಜಿ ಬಸವ ಮಂಟಪ ಬೀದರ, ಪೂಜ್ಯ ಶ್ರೀ ಬಸವಪ್ರಭು ಸ್ವಾಮೀಜಿ, ಪೂಜ್ಯ ಶ್ರೀ ಪ್ರಭುಲಿಂಗ ಸ್ವಾಮೀಜಿ ಹೈದರಬಾದ, ನಾನು ಶ್ರೀಕಾಂತ ಸ್ವಾಮಿ ಕರ್ನಾಟಕ ರಾಜ್ಯ ಸಂಚಾಲಕ, ಡಾ ಮಹೇಶ ಬಿರಾದಾರ ಅಧ್ಯಕ್ಷ ರಾಬದ ಬೀದರ ನಗರ, ಶ್ರೀ ಶಿವರಾಜ ಪಾಟೀಲ ಅತಿವಾಳ, ಶ್ರೀ ಶಿವಶರಣಪ್ಪ ಪಾಟೀಲ ಹಾರುರಗೆರಿ ಇನ್ನಿತರರು ಭಾಗವಹಿಸಿ ಬೆಂಬಲ ಸೂಚಿಸಿದ ಎಲ್ಲರಿಗೂ ಶುಭಾಶಯ ಹಾಗೂ ಧನ್ಯವಾದ.

ನಮ್ಮ ಮಹಾರಾಷ್ಟ್ರ ಹೋರಾಟ ಸುಮಾರು 2017ರಿಂದ ಪ್ರಾರಂಭ ಆಗಿದ್ದು ಪೂಜ್ಯ ಶ್ರೀ ಶಿವಲಿಂಗ ಶಿವಾಚಾರ್ಯರ ಅಹಮದಪೂರ ನೇತೃತ್ವದಲ್ಲಿ ಹಾಗೂ ಪೂಜ್ಯ ಡಾ ಮಾತೆ ಮಹಾದೇವಿ ಅವರ ಮಾರ್ಗದರ್ಶನದಲ್ಲಿ ಯಶಸ್ವಿ ಆಗಿ ನಡೆದಿದ್ದವು, ಅವರು ನಮ್ಮನ್ನು ಅಗಲಿದ್ದಾರೆ, ಈ ಯಶಸ್ಸಿಗೆ ಅವರನ್ನು ಸ್ಮರಿಸುತ್ತೇವೆ. ನಾವು ಕರ್ನಾಟಕ ಸಾವಿರಾರು ಲಿಂಗಾಯತರು ಮಹಾರಾಷ್ಟ್ರ ಎಲ್ಲ ರಾಲಿಯಲ್ಲಿ ಉಪಸ್ತಿತರಿದ್ದು ಬೆಂಬಲ ಕೊಟ್ಟಿದ್ದೆವು.

ಶ್ರೀಕಾಂತ ಸ್ವಾಮಿ, ಕರ್ನಾಟಕ ರಾಜ್ಯ ಸಂಚಾಲಕ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ.

Leave a Reply

Your email address will not be published. Required fields are marked *