ಹಾರಕೂಡ ಶ್ರೀಗಳ 516ನೇ ತುಲಾಭಾರ
ಬೀದರ ಜಿಲ್ಲೆಯ ಬಸವಕಲ್ಯಾಣ ನಗರದ ಶಿವಪುರದಲ್ಲಿ ಸೆಟಗಾರ ಮತ್ತು ಬಿರಾದರ ಪರಿವಾರದ ವತಿಯಿಂದ ಸುಕ್ಷೇತ್ರ ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರ 516ನೇ ತುಲಾಭಾರ ಕಾರ್ಯಕ್ರಮ ಜರಗಿತು.
ನಗರದ ಶ್ರೀ ಭೀಮಶ ಸೆಟಗಾರ ದಂಪತಿಗಳು ಪಾರಮ್ಮ ನಿಲಯದ ಗೃಹಪ್ರವೇಶ ಹಾಗೂ ವಾಸ್ತು ಶಾಂತಿ ಕಾರ್ಯಕ್ರಮದಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ ಹಾರಕೂಡ ಪರಮಪೂಜ್ಯರ ತುಲಾಭಾರ ನೆರವೇರಿಸಿ, ಆಶೀರ್ವಾದ ಪಡೆದರು.
ವರದಿಗಾರರು,
ರಾಹುಲ ಕ್ರಾಂತಿಕಾರಿ ಬೀದರ ಜಿಲ್ಲೆ
