“ಬಸವ ಉತ್ಸವ 2023”
ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದ ಹಾರಕೂಡದ ಪರಮ ಪೂಜ್ಯರು
ಬೀದರ ಜಿಲ್ಲೆಯ ಬಸವಕಲ್ಯಾಣ ನಗರದ ರಥ ಮೈದಾನದಲ್ಲಿ, ಬಸವ ಉತ್ಸವದ ಎರಡನೆಯ ದಿನ ಜರುಗಿದ ಸಾಂಸ್ಕೃತಿಕ ಮತ್ತು ಸಂಗೀತ ಕಾರ್ಯಕ್ರಮವನ್ನು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರು ವೀಕ್ಷಿಸಿದರು.
ಖ್ಯಾತ ಚಲನಚಿತ್ರ ಗಾಯಕರಾದ ಅನನ್ಯಾ ಭಟ್, ಷಣ್ಮುಖ ಪ್ರಿಯಾ ಮತ್ತು ನಿಹಾಲ್ ತೌರೋ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಬಸವ ಉತ್ಸವವು ಸು ವ್ಯವಸ್ಥಿತವಾಗಿ ಆಯೋಜಿಸಿದ ಜಿಲ್ಲಾಧಿಕಾರಿಗಳಿಗೆ, ತಾಲೂಕಿನ ಶಾಸಕರಾದ ಶ್ರೀ ಶರಣು ಸಲಗರ ಅವರಿಗೆ ಮತ್ತು ಜಿಲ್ಲಾಡಳಿತ ಹಾಗೂ ತಾಲೂಕಿನ ಆಡಳಿತ ಅಧಿಕಾರಿಗಳಿಗೆ ಹಾರಕೂಡದ ಪರಮ ಪೂಜ್ಯರು, ಪೂಜ್ಯರ ಭಾವಚಿತ್ರ ನೀಡಿ ಆಶೀರ್ವದಿಸಿದರು.
ಭಾಲ್ಕಿ ಶ್ರೀಗಳು, ಹುಲಸೂರ ಶ್ರೀಗಳು, ಸಾಯಿಗಾ೦ವ್ ಶ್ರೀಗಳು, ಬೇಲೂರಿನ ಶ್ರೀಗಳು ಸೇರಿದಂತೆ ಸಹಸ್ರಾರು ಬಸವ ಅಭಿಮಾನಿಗಳು ಉಪಸ್ಥಿತರಿದ್ದರು.
