“ಪತ್ರ ಕೊಡಲು ಬನ್ನಿ, ಆದರೆ ವಿಡಿಯೋ ಮಾಡಬೇಡಿ” ಎಂದು ಹೇಳಿದ ಲೋಕಾಯುಕ್ತರ ನಿಬಂಧನೆಗಳನ್ನು ತಿರಸ್ಕರಿಸಿ, ಧಿಕ್ಕರಿಸಿ, “ಇದು ಖಾಸಗಿ ಭೇಟಿ ಅಲ್ಲ, ಅವರೊಂದಿಗೆ ಚಹಾ ಕುಡಿಯಲು ನಾವಿಲ್ಲಿ ಬಂದಿಲ್ಲ” ಎಂದು ಪೊಲೀಸರಿಗೆ ತಿಳಿಸಿ ಅಲ್ಲಿದ್ದ ಮಾಧ್ಯಮದವರೊಂದಿಗೆ ಮಾತನಾಡಿ ಬಂದೆವು.

ಈಗಿನ ಲೋಕಾಯುಕ್ತ BS ಪಾಟೀಲ್, ಆ ಹುದ್ದೆಗೆ ಅನರ್ಹ. ಇಂತಹ ಜವಾಬ್ದಾರಿಯುತ ಹುದ್ದೆಗೆ ಅವರ ನೇಮಕಾತಿ ಸರಿಯಲ್ಲ ಎಂದು ರಾಜ್ಯ ಹೈಕೋರ್ಟಿನಲ್ಲಿ ಎಸ್.ಆರ್.ಹಿರೇಮಠರು ದಾವೆ ಸಹ ಹೂಡಿದ್ದಾರೆ.
ಸಹಜವಾಗಿಯೇ ಅವರ ಕೆಳಗಿನ ಅಧಿಕಾರಿಗಳೂ ಅನರ್ಹರೂ, ಭ್ರಷ್ಟರೂ ಆಗಿದ್ದಾರೆ ಎನ್ನುವುದನ್ನು ಇತ್ತೀಚಿನ ಘಟನೆಗಳು ಹೇಳುತ್ತಿವೆ. ಇದನ್ನು ಕೇಳುವ ಧಮ್ಮು, ತಾಕತ್ತು ಇರುವ ಏಕೈಕ ಪಕ್ಷವೆಂದರೆ ಅದು KRS ಪಕ್ಷ ಮಾತ್ರ.
ಏಳಿ! ಎದ್ದೇಳಿ! ವೀರಕನ್ನಡಿಗರೇ,
ಭ್ರಷ್ಟರನ್ನು ತೊಲಗಿಸುವ ತನಕ ವಿರಮಿಸದಿರಿ.
KRS ಪಕ್ಷವನ್ನು ಬೆಂಬಲಿಸಿ; ಕರ್ನಾಟಕ ರಕ್ಷಿಸಿ.
ಈಗಲ್ಲವಾದರೆ ಇನ್ಯಾವಾಗ? ನೀವಲ್ಲದಿದ್ದರೆ ಇನ್ಯಾರು?
ಬನ್ನಿ, ನಾವೆಲ್ಲಾ ಜೊತೆಗೂಡಿ #ಲಂಚಮುಕ್ತಕರ್ನಾಟಕ, ಬಸವಣ್ಣನ #ಕಲ್ಯಾಣಕರ್ನಾಟಕ, ಕುವೆಂಪುರವರ #ಸರ್ವೋದಯಕರ್ನಾಟಕ’ವನ್ನು ಕಟ್ಟೋಣ.