
ಗದುಗಿನ ಇತಿಹಾಸ ಪ್ರಸಿದ್ಧ ವಿದ್ಯಾ-ಮಂದಿರ ಮುನ್ಸಿಪಲ್ ಸ್ಕೂಲ್ ಒಂದಾನೊಂದು ಕಾಲದಲ್ಲಿ ಮುನ್ಸಿಪಲ್ ಸ್ಕೂಲ್ ಎಂದರೆ ಸುತ್ತಲಿನ ಶಾಲೆಗಳಿಗೆ ಮೈ-ನಡುಕವಾಗುತ್ತಿತ್ತು, ಘಟಾನುಗಟಿಗಳನ್ನು ಮಹಾನ್ ಸಾಧಕರನ್ನು ಹುಟ್ಟು ಹಾಕಿದ ವಿದ್ಯಾಸಂಸ್ಥೆ ಅಂದರೆ ಅದು ಮುನ್ಸಿಪಲ್ ಸ್ಕೂಲ್
1885 ರಲ್ಲಿ ಸ್ಥಾಪನೆಗೊಂಡ ಸಂಯುಕ್ತ ಮಹಾವಿದ್ಯಾಲಯದ ಇತಿಹಾಸವನ್ನ ನೋಡಿದಾಗ ಶ್ರೀ ಚೆನ್ನವೀರ ಕಣವಿ ರಂತಹ ಮಹಾನ್ ಮೇಧಾವಿಗಳು ಭಾರತ ರತ್ನ ಖ್ಯಾತಿಯ ಪಂಡಿತ್ ಭೀಮಸೇನ್ ಜೋಶಿ ರಂತಹ ಕಲಾ ದಿಗ್ಗಜರು ಹುಲಕೋಟಿ ಹುಲಿಯೆಂದೆ ಖ್ಯಾತರಾದಂತಹ ಎಚ್ ಕೆ ಪಾಟೀಲ್ ದಂತಹ ರಾಜಕೀಯ ಮತ್ಸದಿ ಯವರನ್ನು ಸಮಾಜಕ್ಕೆ ಪರಿಚಯಿಸಿದ ಕೀರ್ತಿ ನಮ್ಮ ಮುನ್ಸಿಪಲ್ ಶಾಲೆಗೆ ಸಲ್ಲುತ್ತದೆ. 1998 ರಲ್ಲಿ ತನ್ನ 9ನೇ ತರಗತಿಯಲ್ಲಿಯೇ ಪತ್ರಿಕೆಯ ಸಂಪಾದಕಗಾಗಿ ಪ್ರಪಂಚದ ಅತ್ಯಂತ ಕಿರಿಯ ವಯಸ್ಸಿನ ಪತ್ರಿಕಾ ಸಂಪಾದಕನೆಂಬ ಹೆಗ್ಗಳಿಕೆಯನ್ನು ಗಳಿಸಿದ ನನ್ನನ್ನು ಹುಟ್ಟು ಹಾಕಿದ್ದು ಸಹ ಮುನ್ಸಿಪಲ್ ಸ್ಕೂಲ್.
ಕನಿಷ್ಠ 8-10 ವರ್ಷಗಳಿಂದ ಸಂಕಷ್ಟಕ್ಕೆ ತಲುಪಿದ್ದ ಮುನ್ಸಿಪಲ್ ಸ್ಕೂಲ್ ಉಳಿಸಬೇಕು ಅಂತ ತುಂಬಾ ಸಾಹಸಪಟ್ಟೆವು ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿದ್ದ ನನ್ನ ಎರಡು ಮಕ್ಕಳನ್ನ ಮುನ್ಸಿಪಾಲ್ ಸ್ಕೂಲ್ ನ ಕನ್ನಡ ಮಾದ್ಯಮಕ್ಕೆ ಸೇರಿಸಿ ಸೇವ್ ಮೈಸ್ಕೂಲ್ ಹೋರಾಟಕ್ಕೆ ಕಿಚ್ಚು ಹಚ್ಚಿದೆ ಮುಂದೆ ಹೊಸಪೇಟೆ ಕಂಪ್ಲಿ ಬಳ್ಳಾರಿಯಿಂದ ಕನಿಷ್ಠ 35 ಮಕ್ಕಳನ್ನು ಇದೇ ಶಾಲೆಗೆ ಸೇರಿಸಲು ನನ್ನ ತಂಡದ ಮೂಲಕ ಪ್ರಯಾಸಪಟ್ಟು ಮಕ್ಕಳನ್ನು ಶಾಲೆಗೆ ಸೇರಿಸಿದೆವು. ನನ್ನ ಮುನ್ಸಿಪಲ್ ಸ್ಕೂಲ್ ಬಗ್ಗೆ ಮಾಧ್ಯಮಗಳಲ್ಲಿ ಬಂದರೆ ಶಾಲೆಯ ಘನತೆಗೆ ಕೊಂದಾದಿತು ಎಂದು ಕನಿಷ್ಠ ಎರಡು ವರ್ಷಗಳಿಂದ ತೆರೆಮರೆಯಲ್ಲಿಯೇ ಹೋರಾಟ ಮಾಡಿದೆ ಎಷ್ಟೇ ಹೇಳಿದಾಗಲೂ ಕೂಡ ಮುನ್ಸಿಪಲ್ ಸ್ಕೂಲ್ ನ ಮೊಂಡು ಆಡಳಿತ ಎಚ್ಚೆತ್ತುಕೊಳ್ಳಲಿಲ್ಲ.
ಮೊದಲೇ 8 ವರ್ಷಗಳಿಂದ ಮೈಉಂಡಿದ್ದ ಮುನ್ಸಿಪಲ್ ಸ್ಕೂಲ್ ತಂಡ ಲಾಕ್ಡೌನ್ ಬಂದ ಮೇಲಂತೂ ಹೇಳೋದೇ ಬೇಡ ಮುನ್ಸಿಪಲ್ ಸ್ಕೂಲ್ ಬಗ್ಗೆ ದಾಖಲೆಗಳನ್ನು ಕಲೆ ಹಾಕಿದೆ ಆ ದಿನಗಳಲ್ಲಿ ದಕ್ಷ ಮತ್ತು ಒಳ್ಳೆಯ ಆಡಳಿತ ನಡೆಸ್ತಾ ಇರುವಂತಹ ಕಟ್ಟಿಮನಿ ಸರ್ ಹೋದ ಮೇಲಂತೂ ಮುನ್ಸಿಪಲ್ ಸ್ಕೂಲ್ ದಿವಾಳಿ ಆಯಿತು ಕನಿಷ್ಠ ಎರಡು ವರ್ಷಗಳ ಕಾಲ ಸೇವ್ ಮೈ ಸ್ಕೂಲ್ ಎಂಬ ಅಭಿಯಾನವನ್ನು ನಡೆಸಿ ಶಾಲೆ ಉಳಿಸಲು ಸಾಕಷ್ಟು ಸಾಹಸ ಪಡಬೇಕಾಯಿತು ಆದರೆ ಮುನ್ಸಿಪಲ್ ಸ್ಕೂಲ್ ಆಡಳಿತ ಸೇವ್ ಮೈ ಸ್ಕೂಲ್ ಅಭಿಯಾನಕ್ಕೆ ಬಗ್ಗಲಿಲ್ಲ ಕೊನೆಗೆ 2020 ಡಿಸೆಂಬರ್ ತಿಂಗಳು ಮುನ್ಸಿಪಲ್ ಸ್ಕೂಲ್ ಗೆ ಯಮಗಂಡಕಾಲಶುರುವಾಯ್ತು, ಮುನ್ಸಿಪಲ್ ಸ್ಕೂಲಿನ ಅವ್ಯವಸ್ಥೆಯ ಬಗ್ಗೆ ಮುನ್ಸಿಪಲ್ ಸ್ಕೂಲಲ್ಲಿ
ಮಕ್ಕಳಿಗೆ ಪಾಠ ಮಾಡದೆ ಇರುವ ಬಗ್ಗೆ ಗದಗ ಜಿಲ್ಲೆಯ ಡಿಡಿಪಿಐ ಬಿಇಓ ಅಷ್ಟೇ ಅಲ್ಲ ನಗರಸಭೆಯ ಪೌರಾಯುಕ್ತರಿಗೂ ಸಹ ಲಿಖಿತವಾದ ದೂರನ್ನು ಸಾಕ್ಷಿಗಳ ಸಮೇತ ಸಲ್ಲಿಸಲಾಯಿತು.
ಅಲ್ಲಿಂದ ಶುರುವಾಯಿತು ನೋಡಿ ಮುನ್ಸಿಪಲ್ ಪಾಪಿಗಳ ತಂಡ ಮಹಾಪಾಪಿಗೆ ಸವಾಲ್ ಹಾಕುವಂತೆ ಕನಿಷ್ಠ 8/10 ವ್ಯಕ್ತಿಗಳಿಂದ ಬೆದರಿಕೆ
ಹಾಕಿಸಿತು ಲಕ್ಷಗಟ್ಟಲೆ ಹಣದ ಡಿಮಾಂಡು ಕೂಡ ಆಯ್ತು ಹಣಕ್ಕೆ ಬಗ್ಗದಾಗ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದು ನಮ್ಮ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಅಷ್ಟೇ ಅಲ್ಲದೆ ಅದೇ ಶಾಲೆಯಲ್ಲಿ ಕಲಿಯುತ್ತಿದ್ದ ನನ್ನ ಇಬ್ಬರು ಮಕ್ಕಳಿಗೆ ವಿವಿಧ ರೀತಿಯಲ್ಲಿ ಮಾನಸಿಕ ಹಿಂಸೆ ನೀಡಲು ಆರಂಬ ಮಾಡಿದರು ಕನಿಷ್ಠ ಎರಡು ತಿಂಗಳಾಗುತ್ತಾ ಬಂದಿತು ನನ್ನ ಮಕ್ಕಳಿಗೆ ಏನಾದರೂ ಮಾಡಿಯಾರು ಅಂತ ನನ್ನ ಮಕ್ಕಳನ್ನು ಶಾಲೆಗೆ ಕಳುಹಿಸಿಲ್ಲ. ಈ ಬಗ್ಗೆ ನನ್ನ ಮಕ್ಕಳಿಗೆ ರಕ್ಷಣೆ ಕೊಡಿ ಎಂದು ಸಂಬಂದಿಸಿದ ಅಧಿಕಾರಿಗಳಿಗೆ ಹೇಳಿದರೂ ಡೋಂಟ್ ಕೇರ್.
ವರ್ಷಗಳಿಂದ ಇಂಗ್ಲಿಷ್ ಸೇರಿದಂತೆ ಇತರೆ ಪಾಠವೇ ನಡೆದಂತ ಈ ಶಾಲೆಯ SSLC ಮಕ್ಕಳಿಗೆ ನಾಳೆ ಎಕ್ಸಾಮ್ ನಲ್ಲಿ ಹೇಗೆ ಎಂಬ ಪ್ರಶ್ನೆಗೆ ಡಿಡಿಪಿಐ ಬಿಇಒ ಕಮಿಷನರ್ ಯಾವ ಅಧಿಕಾರಿಯೂ ಕೂಡ ಉತ್ತರ ಕೊಡಲಿಲ್ಲ ಕುಲಕರ್ಣಿ ಎಂಬ ದಂಡಪಿಂಡ ಪ್ರಿನ್ಸಿಪಾಲ್ ಬಂದ ಮೇಲಂತೂ ಸಂಪೂರ್ಣ ಶಾಲೆ ಹಾಳಾಗಿದೆ ಶಾಲೆಯ ಖಾತೆಯಿಂದ ಸೆಲ್ಫ್ ಚೆಕ್ ಮೂಲಕ ಲಕ್ಷಾಂತರ ಹಣ ಪಂಗನಾಮ ಹಾಕಲಾಗಿದೆ ಮುನಿಸಿಪಾಲ್ ಸ್ಕೂಲ್ ನ ಸಂಪೂರ್ಣ ತನಿಖಾ ವರದಿಯನ್ನು ಈ ಸಂಚಿಕೆಯಲ್ಲಿ ಪ್ರಕಟಿಸಬಹುದಾಗಿತ್ತು ಆದರೆ ಇನ್ನೂ ಕೆಲವು ಸಾಕ್ಷಿಗಳು ಕೈ ಸೇರಬಕಾಗಿದೆ ಹೊಂದಾಣಿಕೆ ಮಾಡಿಕೊಂಡ ಇಲಾಖೆಗಳು, ಇವುಗಳಿಗೆ ಸಂಬಂಧಪಟ್ಟಂತಹ ಇನ್ನೂ ಅನೇಕ ಅನೇಕ ಸಾಕ್ಷಿಗಳು ಪ್ರಸ್ತುತ ಪಡಿಸಲು ಪತ್ರಿಕೆಯ ಪುಟಗಳು ಸಾಲಲಿಕ್ಕಿಲ್ಲ.
ಸೇವ್ ಮೈ ಸ್ಕೂಲ್ ಎಂಬ ಅಭಿಯಾನ ಇನ್ನು ನಡಿತಾ ಇದೆ ಸದರಿ ವಿಷಯದ ಬಗ್ಗೆ ಧಾರವಾಡದ ಶಿಕ್ಷಣ ಇಲಾಖೆಯ ಆಯುಕ್ತರಿಗೆ ವರದಿ ಸಲ್ಲಿಸಲಾಗಿದೆ ಪಟ್ಟು ಬಿಡದೆ ನಮ್ಮ ಹೋರಾಟ ಮುನ್ನಡೆದಿದೆ ಮುನ್ಸಿಪಲ್ ಸ್ಕೂಲ್ ನ ಕುಲ್ಕರ್ಣಿ ಮನೆಗೆ ಹೋಗೋದು ನಿಶ್ಚಿತ ಅಷ್ಟೇ ಅಲ್ಲ ಮಾಹಿತಿ ಹಕ್ಕಿನ ಮೂಲಕವಾಗಿ ಪಡೆದ ಅನೇಕ ದಾಖಲಾತಿಗಳಲ್ಲಿ ಇನ್ನೆಷ್ಟೋ ನಿಗೂಢಗಳು ಅಡಕವಾಗಿದೆ ಆ ಎಲ್ಲ ನಿಗೂಢಗಳು ಇಡೀ ಶಾಲೆಯನ್ನೇ ಬಲಿ ತೆಗೆದುಕೊಳ್ಳುವುದರಲ್ಲಿ ಸಂದೇಹವಿಲ್ಲ
ನಮ್ಮ ಹೋರಾಟ ನಡಿತಾ ಇದೆ ಇಷ್ಟಕ್ಕೆ ಮುಗಿಲಿಲ್ಲ ಮುನ್ಸಿಪಲ್ ಸ್ಕೂಲ್ ಕಹಾನಿ.. ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಮಾನ್ಯ ನ್ಯಾಯಾಲಯದ ಮೊರೆ ಹೋಗಲು ನಾವು ಸಿದ್ದತೆ ನಡೆಸಿದ್ದೇವೆ.
ಸಂಬಂದಪಟ್ಟ ಅಧಿಕಾರಿಗಳು ಶಾಲೆಯಲ್ಲಿ ಕಲಿಯುತ್ತಿರುವ ನನ್ನ ಮಕ್ಕಳಿಗೆ ರಕ್ಷಣೆ ಕೊಡುವರೇ.. ತಪ್ಪಿತಸ್ತರಿಗೆ ಶಿಕ್ಷೆಯಾವುದುದೆ ಕಾಡು ನೋಡಬೇಕಾಗಿದೆ.