ಪಿರಸಾಬ್ ಕೌತಾಳ್ ರವರ ಸಾರಥ್ಯದಲ್ಲಿ ಅಕ್ಷತಾರೋಹಣ |
ವಿಶ್ವದಾದ್ಯಂತ ಗೌರವಾರ್ಥ ಸ್ಥಾನವನ್ನು ಹೊಂದಿದ ಗದುಗಿನ ಪುಣ್ಯಭೂಮಿ ಆ ಸ್ಥಾನವನ್ನು ಹೊಂದಿದ್ದು ಪರಮಪೂಜ್ಯ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಕೃಪೆಯಿಂದ. ಇಂತಹ ಐತಿಹಾಸ ಗದುಗಿನ ನೆಲದಲ್ಲಿ ಹುಟ್ಟಿದ ರಾಜಕೀಯ ಧಿಮಂತ ನಾಯಕ ಪಿರಸಾಬ್ ಕೌತಾಳ ಇವರನ್ನು ರಾಜಕೀಯ ನಾಯಕ ಅನ್ನುವುದಕ್ಕಿಂತ ಭಹು ಪ್ರತಿಭೆಯ ನಾಯಕ ಅಂತ ಹೇಳಬಹುದು. ಬಡಜನರ ಪಾಲಿಗೆ ಮಾತೃ ಹೃದಯದ ಮಹಾನಾಯಕ ಅಂತ ಕರೆದರೆ ಸಂಗೀತ ಸಾಮ್ರಾಜ್ಯದಲ್ಲಿಯೂ ತನ್ನನ್ನು ಗುರುತಿಸಿಕೊಂಡ ಕೌತಾಳ್ ಇವರು ಸುಂದರವಾಗಿ ಹಾಡನ್ನು ಕೂಡ ಹಾಡುವುದು ನಿಜವಾಗಿಯೂ ಸಂತೋಷವನ್ನು ಉಂಟುಮಾಡುತ್ತದೆ.
ಜನರ ದೃಷ್ಟಿಯಲ್ಲಿ ಪಿರಸಾಬ್ ಕೌತಾಳ್ ಅಂದರೆ ಒಂದು ರೀತಿಯ ಭಯ ಅಂತಾನೇ ಹೇಳಬಹುದು ಆದರೆ ಆ ಮಹಾ ಘಂಬಿರ ಮುಖದ ಹಿಂದೆ ಇರುವ ಮಾತೃ ಹೃದಯವನ್ನು ಹತ್ತಿರದಿಂದ ನೋಡಿದವರೇ ಬಲ್ಲರು.
ಮಾತೃ ಹೃದಯಿ ಕೌತಾಳ್ ರವರ ನೇತೃತ್ವದಲ್ಲಿ ಹಾಗೂ ಎಚ್ ಕೆ ಪಾಟೀಲ್ ಅಭಿಮಾನಿ ಬಳಗ ಸಾರಥ್ಯದಲ್ಲಿ ಗದುಗಿನ ನೆಲದಲ್ಲಿ ನಡೆದ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ 109 ನೇ ಪುಣ್ಯತಿತಿ ಅಂಗವಾಗಿ ನಡೆದ ಶ್ರೀ ಗವಾಯಿ ಸಂಗೀತ ಸಂಜೆ ರಸಮಂಜರಿ ಕಾರ್ಯಕ್ರಮವು ನಿಜವಾಗಿಯೂ ಕಲಾವಿಧರ ಪಾಲಿಗೆ ಉತ್ತಮ ಕಾರ್ಯಕ್ರಮ, ಪಿರಸಾಬ್ ಕೌತಾಳ್ ಇವರಿಗೆ ಇರುವ ಸಂಗೀತ ಮತ್ತು ಕಳೆಯ ಪ್ರೀತಿ ಇಲ್ಲಿ ಎತ್ತಿ ತೋರಿಸುತ್ತದೆ. ನಾಡಿನ ಉದ್ದಗಲಕ್ಕೂ ಇರುವ ಸಂಗೀತಗಾರರು ಕಲಾವಿಧರು ಇವರನ್ನೆಲ್ಲ ಒಂದುಗೂಡಿಸಿದ್ದು ನಿಜವಾಗಿಯೂ ಗದುಗಿನ ಹೆಮ್ಮೆ. ಜೂನಿಯರ್ ಉಪೇಂದ್ರ, ಜೋನಿಯರ್ ರವಿಚಂದ್ರನ್, ಗದುಗಿನ ಹೆಮ್ಮೆಯ ಸಂಗೀತಗಾರ ಪುಟ್ಟರಾಜರ ಪಾದಾರವಿಂದಗಳಲ್ಲಿ ಬೆಳೆದ ಅತ್ಯೂತಮ ಸಂಗೀತ ಧಿಗ್ಗಜ ಮಹೆಬೋಬ್ ರಂತಹ ರಂತಹ ಮಹಾನ್ ವ್ಯಕ್ತಿಗಳನ್ನು ಜೊತೆಗೆ ಸೇರಿಸಿಕೊಂಡು ಗದುಗಿನ ಹಾಸ್ಯ ಕಲಾವಿಧರು, ನೃತ್ಯ ಪಾರಿಣ್ಯರು, ಸಂಗೀತ ಉತ್ಸಾಹಿಗಳು ಇವರನ್ನೆಲ್ಲ ಒಂದೆಡೆ ಸೇರಿಸಿ ನಡೆಸಿದ ಕಾರ್ಯಕ್ರಮ ನಿಜಾಗಿಯೂ ಗದುಗಿನ ಪಾಲಿಗೆ ಹೆಮ್ಮೆಯ ವಿಷಯ.
ಗದುಗಿನ ನೆಲದಲ್ಲಿ ಜನ ಭಯಭಿತರಾಗಿಯೇ ಕೌತಾಳ್ ರವರನ್ನು ನೀಡಿದ್ದೆ ಹೆಚ್ಚು ಆದರೆ ಶ್ರೀ ಗವಾಯಿ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಪಿರಸಾಬ್ ಕೌತಾಳ್ ಇವರು ಸ್ಟೇಜ್ ಮೇಲೆ ಹಾಡಿದ ನಾವಾಡುವ ನುಡಿಯೇ ಕನ್ನಡ ನುಡಿ ಹಾಡಿಗೆ ಇಡಿ ಗದುಗಿನ ನೆಲವೇ ತಲೆಬಾಗುವಂತದ್ದು. ಕೌತಾಳ್ ಇವರು ಕೇವಲ ರಾಜಕೀಯ ನಾಯಕರು ಅಲ್ಲ ಅವರಲ್ಲಿ ಒಬ್ಬ ಸಂಗಿತಗಾರನೂ ಇದ್ದಾನೆ ಎಂಬುದನ್ನು ಗದುಗಿನ ನೆಲ ಕಂಡುಕೊಂಡಿತು. ಸರ್ವ ಧರ್ಮ ಸಮನ್ವಯವನ್ನೂ ಚಾಚೂ ತಪ್ಪದೆ ಪಾಲಿಸುವ ಅಣ್ಣನವರು ಗದುಗಿನ ಪಾಲಿಗೆ ಹಿರಿಮೆ ಅಂದರೆ ತಪ್ಪಲ್ಲ.
ದಿನಾಂಕ 03/01/2023 ರಂದು ಪಂಡಿತ ಪುಟ್ಟರಾಜರ ಪಾದಾರವಿಂದಗಳಲ್ಲಿ ಪಿರಸಾಬ್ ಕೌತಾಳ್ ರವರು ನಡೆಸಿಕೊಟ್ಟ ಮೂವತ್ತು ಜೋಡಿಗಳ ಸರ್ವಧರ್ಮ ಸಾಮೂಹಿಕ ವಿವಾಹ ನಿಯವಾಗಿಯೂ ಮೆಚ್ಚುಗೆಗೆ ಪಾತ್ರವಾದದ್ದು, ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಅಂತ ಇರುವ ಪ್ರತಿತಿಯನ್ನು ಅರಿತ ಅಣ್ಣನವರು ಮಕ್ಕಳ ಮದುವೆ ಮಾಡಲು ಶಕ್ತಿ ಇರದ ಬಡ ತಂದೆ ತಾಯಿಗಳಿಗೆ ಆಶ್ರಯವಾಗಿ ಮಕ್ಕಳ ಮದುವೆಯ ಜವಾಬ್ದಾರಿ ತೆಗೆದುಕೊಂಡಿದ್ದು ಇವರ ನಿರ್ಮಲವಾದ ಮನಸನ್ನು ಸೂಚಿಸುತ್ತದೆ. ಮೊನ್ನೆ ಯಾವುದೋ ಪತ್ರಿಕೆ ಸದರಿ ವಿಷಯದ ಬಗ್ಗೆ ವರದಿ ಪ್ರಕಟಿಸಿತ್ತು. ಆದರೆ ಆ ಪತ್ರಿಕೆಯ ಟೈಟಲ್ ಕೌತಾಳ್
ರವರನ್ನು ಪ್ರಿತಿಸುವವರಿಗೆ ಸಿಟ್ಟು ತರಿಸುತ್ತದೆ. ಗದಗ ಪುಟ್ಟರಾಜ ಗವಾಯಿಗಳ ಜಯಂತಿಯಲ್ಲಿ ಪಿರಸಾಬ್ ಕೌತಾಳನ ಕೈವಾಡ…? ಎಂಬುದು ಯಾವ ರೀತಿಯ ಶಿರೋನಾಮೆ ಎಂದು ಅರ್ಥವಾಗಲಿಲ್ಲ ಏಕವಚನದಲ್ಲಿ ಅಣ್ಣನವರನ್ನು ಪತ್ರಿಕೆಯಲ್ಲಿ ಸಂಭೋದಿಸಿದ್ದು ಸರಿಯಲ್ಲ ಅಂತ ಮಾತ್ರ ಹೇಳಬಹುದು. ಮೂವತ್ತು ಜೋಡಿಗಳ ಸಾಮೂಹಿಕ ಮದುವೆ ಕಾರ್ಯಕ್ರಮದಲ್ಲಿ 1200 ಕುಂಬಮೇಳ ವನ್ನು ಆಯೋಜಿಸಿದ್ದು ಅಣ್ಣನವರ ಸರ್ವಧರ್ಮ ಭಾವೈಕ್ಯತೆಯನ್ನು ಸಾರಿ ಹೇಳುತ್ತದೆ
ಪಿರಸಾಬ್ ಕೌತಾಳ್ ರವರ ಮುಂದಾಳತ್ವದಲ್ಲಿ ಗದುಗಿನ ನೆಲದಲ್ಲಿ ಕಲಾವಿಧರಿಗೆ ಸಂಗೀತಗಾರರಿಗೆ ನೆರವು ಆಗುವಂತಹ ಇನ್ನೂ ಅನೇಕಾನೇಕ ಕಾರ್ಯಕ್ರಮಗಳುನಡೆಯಲಿ. ಯಾವರ ಮೂಲಕ ಸಾಮಾಜಿಕ ಕಾರ್ಯಗಳು ಇನ್ನೂ ಹೆಚ್ಚಾಗಲಿ ಎಂದು ಕೇಳಿಕೊಳ್ಳುತ್ತಾ ಶ್ರೀ ಪಂಡಿತ ಪುಟ್ಟರಾಜರ ಗವಾಯಿಗಳವರ ಆಶೀರ್ವಾದ ಸದಾ ಜೊತೆಗಿರಲಿ ಎಂದು ಪತ್ರಿಕೆ ಆಶಿಸುತ್ತದೆ.