
ದಿನಾಂಕ 21/03/2023 ರಂದು ಏಕತಾ ಫೌಂಡೇಶನ್ ನ ಅಧ್ಯಕ್ಷರಾದ ‘ಶ್ರೀ ರವೀಂದ್ರ ಸ್ವಾಮಿ’ಯವರು #ಏಕತಾ #ಜನಾಶೀರ್ವಾದ_ಯಾತ್ರೆ-2023 ರ ಅಂಗವಾಗಿ ‘ಖಂಡಿಕೇರಾ’ ಗ್ರಾಮಕ್ಕೆ ಭೇಟಿಕೊಟ್ಟರು. ಈ ವೇಳೆ ಜನತಾ ಜನಾರ್ಧನರ ಮನೆ-ಮನೆಗೆ ತೆರಳಿ ಅವರ ಆಶೀರ್ವಾದ ಕೋರಿದರು.

ಜನತಾ ಜನಾರ್ಧನರನ್ನುದ್ದೇಶಿಸಿ ಮಾತನಾಡಿದ ಶ್ರೀ ರವೀಂದ್ರ ಸ್ವಾಮಿಯವರು, ‘ಔರಾದ್ ಕ್ಷೇತ್ರದಲ್ಲಿ ರೈತರು ಬೆಳೆದ ಬೆಳೆಯನ್ನು ಮಾರಲು ಒಂದು ಸರಿಯಾದ ಮಾರುಕಟ್ಟೆಯಿಲ್ಲ. ಅವರು ಬೆಳೆದ ಬೆಳೆಗೆ ಒಂದು ನ್ಯಾಯಯುತವಾದಂತಹ ಬೆಲೆ ಸಿಗುತ್ತಿಲ್ಲ. ಅತಿವೃಷ್ಟಿ-ಅನಾವೃಷ್ಟಿ ಗಳಲ್ಲಿ ಬೆಳೆ ಹಾನಿಯಾದರೆ ಅವರಿಗೆ ವಿಮೆ ಸಿಗುತ್ತಿಲ್ಲ. 15 ವರ್ಷದಿಂದ ಹಾಲಿ ಶಾಸಕರು ಇದರ ಬಗ್ಗೆ ಗಮನ ಹರಿಸುತ್ತಿಲ್ಲ’ ಎಂದರು.

ಈ ಸಂದರ್ಭದಲ್ಲಿ ವಿಠಲ್ ಗಡದೆ, ಕಾರ್ತಿಕ್ ಸ್ವಾಮಿ, ಶಿವಾನಂದ ಹಿರೇಮಠ, ತ್ರಿಮುಖ ಸ್ವಾಮಿ, ಕಲ್ಯಾಣರಾವ್ ಪೊಲೀಸ್ ಪಾಟೀಲ್, ಬಸಪ್ಪ ಪಾಂಚಾಳ, ಮಾರುತಿ ಪಾಂಚಾಳ, ಗೋವಿಂದ ಗಡದೆ, ವಿಠಲರಾವ್ ಬಿರಾದಾರ್, ಮನೋಹರ್ ಬಿರಾದಾರ್, ನರಸಿಂಗ್ ಬಿರಾದಾರ್ ಮತ್ತು ಹಲವು ಪ್ರಮುಖರು ಹಾಗೂ ಏಕತಾ ಕಾರ್ಯಕರ್ತರು ಸಾಥ್ ನೀಡಿದರು.
ವರದಿಗಾರರು,
ರಾಹುಲ ಕ್ರಾಂತಿಕಾರಿ