• Tue. May 30th, 2023

M-News

Mahapapi News Karnataka

ಉತ್ತಮ ಅಭಿವೃದ್ದಿಯ ಕನಸಿನತ್ತ ಶ್ರೀ ಶರಣ್ ಪಾಟೀಲ್

Byadmin

Apr 6, 2023

ಕಷ್ಟದಲ್ಲಿದ್ದವರ ಪಾಲಿಗೆ ಹಿರೋ ಅಂದರೆ ಅದು ಉಸಿರು ಫೌಂಡೇಶನ್ ಜನಕ ಶ್ರೀ ಶರಣ್ ಪಾಟೀಲ್ ಎಂದು ಗದುಗಿನ ತುಂಬೆಲ್ಲ ಸದ್ದು ಮಾಡುತ್ತಿರುವುದು ಗದುಗಿನ ವಿಶೇಷ ಅಂತ ಹೇಳಬಹುದು.

            ಈ ಬಾರಿಯ ಬಿಜೆಪಿ ಟಿಕೆಟ್ ಆಕಾಂಕ್ಷಿಯೂ ಸಹ ಅವರಾಗಿದ್ದರು ಟಿಕೆಟ್ ಯಾರಿಗೆ ಸಿಗಲಿ ಯಾರೇ ಚುನಾವಣೆ ನಿಲ್ಲಲಿ ಚುನಾವಣೆ ಮತ್ತದರ ಫಾಲಿತಾಂಶ ಮತ್ತೇನೋ ಆಗಿರಲಿ ಆದರೆ ಸತ್ಯವಾದ ಮಾತು ಏನಂದರೆ ಶರಣ್ ಪಾಟೀಲ್ ರಂತಹ ಜನನಾಯಕರು ಗದುಗಿನ ನೆಲದಲ್ಲಿ ಅತ್ಯವಷಕ

            ಸದಾ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ಅಳವಡಿಸಿಕೊಳ್ಳುವ ಶರಣ್ ಪಾಟೀಲ್ ಸಾಕಷ್ಟು ಸಾಮಾಜಿಕ ಹೋರಾಟಗಳನ್ನು ನಡೆಸುತ್ತಿದ್ದಾರೆ ಹಾಗೂ ಉತ್ತರದ ಅಭಿವೃದ್ದಿಯ ಕನಸಿನತ್ತ ಎಂಬ ತಲೆಬರಹವನ್ನು ಹೊತ್ತು ಉತ್ತಮ ಸಾಮಾಜಿಕ ಕಳಕಳಿಯನ್ನು ಹೊಂದಿದ್ದಾರೆ.

            ಉತ್ತರ ಕರ್ನಾಟಕದ ಅಭಿವೃದ್ದಿ, ಉತ್ತರ ಕರ್ನಾಟಕ ಭಾಗದ ಜನರಿಗೆ ಸಮರ್ಪಕ ಉದ್ಯೋಗ, ಉತ್ತಮ ಶಿಕ್ಷಣ ಸೇರಿದಂತೆ ಜನರ ಅಭಿವೃದ್ದಿಗಾಗಿ ಸಾಕಷ್ಟು ಯೋಜನೆಗಳನ್ನು ಅಳವಡಿಸಿಕೊಂಡಿದ್ದಾರೆ.

            ರಾಜ್ಯಾದ್ಯಂತ ಉಸಿರು ಫೌಂಡೇಶನ್ ಅನ್ನು ಕಟ್ಟಿ ಬೆಳೆಸುತ್ತ ಬಂದಿರುವ ಶರಣ್ ಪಾಟಿಲ್ ಮೂಲ ಗದಗ ಜಿಲ್ಲೆಯ ನರಗುಂದ ತಾಲೂಕಿನ ಬೆನಕನಕೊಪ್ಪ ಗ್ರಾಮದವರು

            ಹಳ್ಳಿ ಹುಡುಗನ ಈ ಸಾಧನೆ ಜನ ಮೆಚ್ಚುವಂತದ್ದು

ಯುವ ಜನರಿಗೆ ಅತಿ ಅವಶ್ಯವಾಗಿ ಬೇಕಾದ ಉದ್ಯೋಗ ಮೇಳಗಳಂತಹ ಮಹತ್ವದ ಕಾರ್ಯಕ್ರಮಗಳನ್ನು ಅಳವಡಿಸುವ ಶರಣ್ ಪಾಟೀಲ್ ನಿರುದ್ಯೋಗಿಗಳ ಪಾಲಿಗೆ ಆಶಾಕಿರಣ

ಉಸಿರು ಫೌಂಡೇಶನ್ ರಾಜ್ಯಾದ್ಯಂತ ಭೃಹತ್ತಾಗಿ ಬೆಳೆಯಲಿ ಶರಣ್ ಪಾಟೀಲ್ ರಂತಹ ಜನಪರ ನಾಯಕರು ರಾಜಕೀಯವಾಗಿ ಅಧಿಕಾರಕ್ಕೆ ಬರಲಿ ಅವರ ಮೂಲಕ ರಾಜ್ಯದ ಉದ್ದಗಲಕ್ಕೂ ನಿರುದ್ಯೋಗಿಗಳು, ಕಷ್ಟದಲ್ಲಿದ್ದವರು, ಮಹಿಳೆಯರು, ರೈತರು, ಕಾರ್ಮಿಕರು ಸರ್ವ ಸಮೂದಾಯದ ಯುವಕ ಯುವತಿಯರು ಸಹಕಾರವನ್ನು ಪಡೆಯಲಿ.             ಹಳ್ಳಿ ಹುಡುಗನ ಕನಸಿನ ಕೋಟೆ ಉಸಿರು ಫೌಂಡೇಶನ್ ಉತ್ಸಾಹಿ ಯುವ ಪೀಳಿಗೆಯ ಪಾಲಿಗೆ ಮಾಧರಿಯಾಗಲಿ ಶರಣ್ ಪಾಟೀಲ್ ರವರನ್ನು ಆದರ್ಶ ಮಾಡಿಕೊಂಡು ಇವತ್ತಿನ ಯುವ ಸಮೂಹ ಸಂಘತಿತರಾಗಲಿ ಎಂದು ಪತ್ರಿಕೆ ಹಾರೈಸುತ್ತದೆ

Leave a Reply

Your email address will not be published. Required fields are marked *