ಪೌರ ಕಾರ್ಮಿಕರ ನೇರ ನೇಮಕಾತಿ ಎಂಬುದು ಕೇವಲ ನಾಟಕ ಎಂಬುದು ಮತ್ತೊಮ್ಮೆ ಸಾಭಿತಾಗಿದೆ ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಕೆಳಹಂತದ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸುವ ಬಗ್ಗೆ ಸಹಾನುಭೂತಿಯಿಂದ ಪರಿಶೀಲಿಸಲಾಗುವುದು ಎಂದು ಸಚಿವ ಎಂ.ಟಿ.ಬಿ. ನಾಗರಾಜ್ ಅಂದು ಬೆಳಗಾವಿ ಅಧಿವೇಶನದಲ್ಲಿ ಹೇಳಿದ ಮಾತು ಮುಂಬರುವ ಚುನಾವಣೆಯಲ್ಲಿ ದಲಿತ ಜನಾಂಗದ ಅಂದರೆ ಪೌರ ಕಾರ್ಮಿಕರ ಮನಸ್ಸು ಗೆಲ್ಲುವುದಕ್ಕಾಗಿ ಎಬುದು ಸಾವಿರ ಪಾಲು ಸತ್ಯ .ಅಂದು ಲೋಡರ್, ಕ್ಲೀನರ್ ಗಳಿಗೆ ವೇತನವನ್ನು ನೇರ ಪಾವತಿ ಮೂಲಕ ನೀಡುವ ಬಗ್ಗೆ ರಾಜ್ಯ ಸರ್ಕಾರ ಮುಕ್ತ ಮನಸ್ಸು ಹೊಂದಿದೆ ಎಂದು ಸಚಿವರು ತಿಳಿಸಿದರೆ ಇಂದು ಪೌರಕಾರ್ಮಿಕರ ಬದುಕಿಗೆ ಕೊಳ್ಳಿ ಇಡಲು ಬೇಕಾದ ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ ಹಾಗೂ ಪೌರ ಕಾರ್ಮಿಕರ ಬದುಕಿಗೆ ಕೊಳ್ಳಿ ಇಟ್ಟೆ ಇಡುತ್ತೇವೆ ಎಂದು ಗದಗ ಬೆಟಗೇರಿ ನಗರಸಬೆಯ ಅಧಿಕಾರಿಗಳು ಶಪತ ಮಾಡಿಕೊಂಡಿದ್ದಾರೆ. ಈ ಮಾತಿಗೆ ಪುಷ್ಟಿ ನೀಡುವಂತೆ ಗದಗ ಬೆಟಗೇರಿ ನಗರಸಭೆಯಲ್ಲಿ ಕಾರ್ಯನಿರ್ವಹಿಸುವ 92 ಜನ ಪೌರ ಕಾರ್ಮಿಕರಲ್ಲಿ ನೇರ ನೇಮಕಾತಿಗೆ ಯಾರೂ ಅರ್ಹರಲ್ಲ ಎಂದು ನಗರಸಭೆ ಸಾಬಿತು ಮಾಡಿ ಎಲ್ಲರೂ ಅನರ್ಹರು ಎಂದು . ಅನರ್ಹ ಪಟ್ಟಿ ಬಿಡುಗಡೆ ಮಾಡಿದೆ,ಈ ಬಗ್ಗೆ ಯಾಕೆ ಯಾವ ಪೌರ ಕಾರ್ಮಿಕ ನಗರಸಭೆಗೆ ಪ್ರಶ್ನೆ ಮಾಡುತ್ತಿಲ್ಲ ಎಂಬುದೇ ವಿಚಿತ್ರ.
ಅಭಿಮಾನದಿಂದ ಹೇಳಿ ನಾನೊಬ್ಬ ದಲಿತ, ಸ್ವಾಭಿಮಾನದಿಂದ ಹೇಳಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ನನ್ನ ದೇವರು, ಎದೆ ತಟ್ಟಿ ಹೇಳಿ ನಾವು ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರು ಕೊಟ್ಟಂತಹ ಸಂವಿಧಾನದ ಅಡಿಯಲ್ಲಿ ಹಕ್ಕಿನಿಂದ ಬದುಕುತ್ತಿದ್ದೇನೆ. ಹೆಮ್ಮೆಯಿಂದ ಹೇಳಿ ನಾನು ಅಂಬೇಡ್ಕರ್ ಅನುಯಾಯಿ. ಆದರೆ ನಮ್ಮ ಹಕ್ಕುಗಳಿಗಾಗಿ ನಾವು ಧ್ವನಿ ಎತ್ತದಿದ್ದರೆ ಮತ್ತೆ ಇನ್ಯಾರು ನಮ್ಮ ಪರವಾಗಿ ಎತ್ತಲು ಸಾದ್ಯ ಗದಗ ಬೆಟಗೇರಿ ನಗರಸಭೆಯಲ್ಲಿ ಕಾರ್ಯ ನಿರ್ವಹಿಸುವ 92 ಜನ ಪೌರ ಕಾರ್ಮಿಕರಲ್ಲಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪೌರ ಕಾರ್ಮಿಕರ ನೇರ ನೇಮಕಾತಿಗೆ 23 ಜನ ಅರ್ಜಿ ಸಲ್ಲಿಸಿದ್ದರು ಆದರೆ ಪೌರ ಕಾರ್ಮಿಕರ ವಿರುದ್ದ ನಗರಸಭೆಯಲ್ಲಿ ಷಡ್ಯಂತ್ರ ನಡೆದದ್ದು ತಡವಾಗಿ ಬೆಳಕಿಗೆ ಬಂದಿದೆ 23 ಜನ ಪೌರ ಕಾರ್ಮಿಕರು ಕೊಟ್ಟ ಅರ್ಜಿಗಳನ್ನು ಪರಿಶೀಲಿಸಿ ಅವುಗಳಿಗೆ ಮಾನ್ಯ ಪೌರಾಯುಕ್ತರ ಸಹಿ ಪಡೆದು ಮೇಲಾಧಿಕಾರಿಗಳಿಗೆ ಕಳುಹಿಸಬೇಕಾಗಿತ್ತು,
ನಗರಸಭೆಯಲ್ಲಿ ಒಬ್ಬ ಸಾರ್ವಜನಿಕ ಯಾವುದೇ ಅರ್ಜಿಯನ್ನು ಕೊಟ್ಟರೂ ಅವುಗಳು ಅನುಕ್ರಮವಾಗಿ ಸಂಬಂದಿಸಿದ ಎಲ್ಲ ಅಧಿಕಾರಿಗಳ ಸಹಿ ಪಡೆದು ನಂತರ ಮಾನ್ಯ ಪೌರಾಯುಕ್ತರ ಸಹಿ ಪಡೆದು ಮುಂದಿನ ಆದೇಶಕಾಗಿ ಸಲ್ಲಿಸಲಾಗುತ್ತದೆ ಆದರೆ ಇಲ್ಲಿ ಪೌರ ಕಾರ್ಮಿಕರ ಅರ್ಜಿಗಳು ತಿರಸ್ಕಾರ ಆಗಬೇಕು ಎಂಬ ಉದ್ದೇಶದಿಂದಲೇ ಅರ್ಜಿಗಳಿಗೆ ಅನುಮೊಧನೆ ಪಡೆಯದೇ ನಗರಸಭೆಯ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ
ಪೌರ ಕಾರ್ಮಿಕರ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಸರಕಾರಕ್ಕೆ ಸಲ್ಲಿಸಬೇಕಾದ ಪೌರ ಕಾರ್ಮಿಕರ ಮಾಹಿತಿಯನ್ನು ಸಹ ಗದಗ ಬೆಟಗೇರಿ ನಗರಸಭೆಯ ಅಧಿಕಾರಿಗಳು ತಪ್ಪಾಗಿ ಸಲ್ಲಿಸಿದ್ದಾರೆ ಕಾರ್ಯನಿರ್ವಹಿಸುವ 92 ಜನ ಪೌರ ಕಾರ್ಮಿಕರ ಬದಲಾಗಿ ಕೇವಲ ಹತ್ತು ಜನ ಕೆಲಸ ಮಾಡುತ್ತಿದ್ದಾರೆಂದು ತಪ್ಪು ಮಾಹಿತಿಯನ್ನು ಸಲಿಸಿ ಉಳಿದ 82 ಜನ ಪೌರ ಕಾರ್ಮಿಕರಿಗೆ ಮೋಸ ಮಾಡಿದ್ದಾರೆ ನಗರಸಭೆಯ ಅಧಿಕಾರಿಗಳು.
ಪೌರ ಕಾರ್ಮಿಕರಿಗೆ ಅನ್ಯಾಯ ಮಾಡಬೇಕು ಎಂಬ ದುರುದ್ದೇಶದಿಂದಲೇ ಸರಕಾರಕ್ಕೆ ತಪ್ಪು ಮಾಹಿತಿ ಕೊಟ್ಟ ಅಧಿಕಾರಿಗಳು ಪೌರಾಯುಕ್ತರ ಸಹಿ ಪಡೆಯದೇ ಅರ್ಜಿಗಳನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಿ ಆ ಅರ್ಜಿಗಳು ತಿರಸ್ಕೃತಗೊಳ್ಳುವ ಹಾಗೆ ಮಾಡಿದ ಅಧಿಕಾರಿಗಳು ಸದರಿ ವಿಷಯದ ಬಗ್ಗೆ ನಾವು ದೂರು ನಿಡಿದಾಗ ನನಗೆ ಗೊತ್ತಿಲ್ಲ ಯಾರು ತಪ್ಪು ಮಾಡಿದ್ದಾರೆ ಅವರನ್ನು ತಾವು ಏನಾದರೂ ಮಾಡಿಕೊಳ್ಳಿ ಎಂದು ಹಾರಿಕೆಯ ಉತ್ತರ ಕೊಟ್ಟ ಪೌರಾಯುಕ್ತರು ಇವರೆಲ್ಲರ ಮೇಲೆ ಪೌರಾಡಳಿತ ಇಲಾಖೆ ಕ್ರಮ ಕೈಗೊಳ್ಳಬೇಕು ಹಾಗೂ ಅನ್ಯಾಯಕ್ಕೊಳಗಾದ ಪೌರ ಕಾರ್ಮಿಕರ ಅರ್ಜಿಗಳನ್ನು ಪುನಃ ಪರಿಶೀಲಿಸಿ ಅರ್ಜಿಗಳಿಗೆ ಮನ್ನಣೆ ನಿಡಬೇಕೆಂದು ಪತ್ರಿಕೆ ವಿನಂತಿಸುತ್ತದೆ. |
ನಗರಸಭೆ ಅಲ್ಲಿಸಿದ ಹತ್ತು ಜನ ಎಂಬ ಮಾಹಿತಿಯ ಅನುಗುಣವಾಗಿ ಅದರಲ್ಲಿ 5 ಜನರನ್ನು ನೇರ ನೇಮಕಾತಿ ಮಾಡಲು ಮಾಡಲು ಸರಕಾರ ಆದೇಶ ನೀಡಿ ಅರ್ಜಿಗಳನ್ನು ಆಹ್ವಾನಿಸಿತ್ತು ಆದರೆ ಈ ಮಾಹಿತಿಯನ್ನೂ ಸಹ ಪೌರ ಕಾರ್ಮಿಕರಿಗೆ ನೀಡದೆ ಮುಚ್ಸಿಟ್ಟಿರುವುದು ಸಂಶಯಕ್ಕೆ ಎಡೆ ಮಾಡಿಕೊಡುತ್ತದೆ ಈ ಬಗ್ಗೆ ವಿಚಾರಿಸಿದಾಗ ಸದರಿ ಮಾಹಿತಿ ನೋಟಿಸ್ ಬೋರ್ಡನಲ್ಲಿ ಅವಳದಿಸಿದ್ದೇವೆ ಎಂದು ಹಾರಿಕೆ ಉತ್ತರ ಕೊಡುವ ಅಧಿಕಾರಿಗಳೇ ನೋಟಿಸು ಬೋರ್ಡ್ ಓದಿ ತಿಳಿದುಕೊಳ್ಳುವಷ್ಟು ವ್ಯವಧಾನ ಪಾಪದ ಪೌರ ಕಾರ್ಮಿಕರಿಗೆ ಇದ್ದಿದ್ದರೆ ಇವತ್ತು ಅವರೂ ಸಹ ನಿಮ್ಮ ಹಾಗೆ ಅಧಿಕಾರಿಗಳು ಆಗಿರುತ್ತಿದ್ದರೂ ಅನ್ನೋ ಅಲ್ಪ ಜ್ಞಾನವಾದರೂ ನಿಮಗೆ ಬೇಡವೇ?
ಪೌರ ಕಾರ್ಮಿಕರ ನೇರ ನೇಮಕಾತಿಯ ಕುರಿತು ಹೋರಾಟಗಾರರಾದ ರಾಘವೇಂದ್ರ ಪರಾಪೂರ ಇವರೂ ಪೌರ ಕಾರ್ಮಿಕರಿಗೆ ತಿಳಿ ಹೇಳಿ ಸಂಘಟಿಕರು ಎಚ್ಚರಿಸಿದಾಗ ಎಚ್ಚರಗೊಂಡ 23 ಜನ ಪೌರ ಕಾರ್ಮಿಕರು ನೇರ ನೇಮಕಾತಿಗೆ ಅರ್ಜಿ ಸಲ್ಲಿಸಿದರು ಈಗಿನ ಪೌರಾಯುಕ್ತರು ಅಮಾನತ್ತು ಆಗಿದ್ದ ಸಮಯದಲ್ಲಿ ಸದರಿ ಅಧಿಕಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಾದ ಶ್ರೀ ಗಂಗಪ್ಪ ರವರೊಂದಿಗೆ ಸದರಿ ಪೌರ ಕಾರ್ಮಿಕರ ಅರ್ಜಿಗಳ ಬಗ್ಗೆ ನಾನು ಮತ್ತು ರಾಘವೇಂದ್ರ ಪರಾಪೂರ ರವರು ಚರ್ಚಿಸಿ ಪೌರ ಕಾರ್ಮಿಕರಿಂದ ಅರ್ಜಿ ಸಲ್ಲಿಸಲಾಗಿತ್ತು ಸದರಿ ಅರ್ಜಿಯಲ್ಲಿ ಪೌರಾಯುಕ್ತರು ನಮೂನೆ 1 ಮತ್ತು 2 ರಲ್ಲಿ ಸಹಿ ಮಾಡಬೇಕಾಗಿದ್ದು ಪರಿಶಿಲನೆಗಾಗಿ ಅರ್ಜಿಗಳನ್ನು ನಗರಸಭೆಯ ಸಂಬಂದಿಸಿದ ಶಾಖೆಗಳಿಗೆ ಹಸ್ತಾಂತರಿಸಲಾಗಿತ್ತು ಆದರೆ ಸಂಬಂದಿಸಿದ ನಗರಸಭೆಯ ಶಾಖೆಗಳು ಅರ್ಜಿಗಳನ್ನು ಪರಿಶಿಲಿಸದೆ ಪೌರಾಯುಕ್ತರ ಸಹಿ ಪಡೆಯದೇ ಯಥಾವತ್ತಾಗಿ ಮೇಲಾಧಿಕಾರಿಗಳಿಗೆ ಸಲ್ಲಿಸಿದ್ದೆ ಎಲ್ಲ ಅರ್ಜಿಗಳು ಅನರ್ಹವಾಗಲು ಕಾರಣವಾಯಿತು.
ಅನರ್ಹಗೊಂಡ 23 ಅರ್ಜಿಗಳ ಬಗ್ಗೆ ಈಗಿರುವ ಪೌರಾಯುಕ್ತರಿಗೆ ಕೇಳಿದರೆ ನನಗೆ ಗೊತ್ತಿಲ್ಲ ನಾ ಇರಲಿಲ್ಲ ಎಂದು ಉತ್ತರಿಸುವುದು ಯಾವ ನ್ಯಾಯ. ಮೊದಲು ಇಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರ ಸುಳ್ಳು ಮಾಹಿತಿಯನ್ನು ನೀಡಿದ ಅಧಿಕಾರಿಗಳು ಮತ್ತು ಈಗ ಸಲ್ಲಿಸಿದ ಅರ್ಜಿಗಳನ್ನು ಪೌರಾಯುಕ್ತರ ಸಹಿ ಪಡೆಯದೇ ಮೆಲಾಧಿಕಾರಿಗಳಿಗೆ ಸಲ್ಲಿಸಿ ಅಧಿಕಾರಿಗಳು ಪೌರ ಕಾರ್ಮಿಕರಿಗೆ ಮೋಸ ಮಾಡಿದ್ದಾರೆ ಅನ್ಯಾಯ ಮಾಡಿದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳಿ ಎಂದರೆ ಯಾವ ಅಧಿಕಾರಿ ತಪ್ಪು ಮಾಡಿದ್ದಾರೂ ಅವರಿಗೆ ಕೇಳಿ.. ಅವರ ಜೊತೆ ನೀವು ಏನಾದರೂ ಮಾಡಿಕೊಳ್ಳಿ ಎಂದು ಉತ್ತರಿಸುವ ಪೌರಾಯುಕ್ತರು ನಗರಸಭೆಯ ಅಧಿಕಾರ ಒಹಿಸಿಕೊಂಡಿದ್ದು ಕೇವಲ ಟೈಮ್ ಪಾಸ್ ಮಾದಲಿಕ್ಕೋ ಎಂಬುದು ನಮ್ಮ ಪ್ರಶ್ನೆ. ತಪ್ಪು ಮಾಡಿದ ಅಧಿಕಾರಿಗಳ ಜೊತೆ ನೀವು ಏನಾದರೂ ಮಾಡಿಕೊಳ್ಳಿ ಎಂದು ಪೌರಾಯುಕ್ತರು ಹೆಳುವ ಮಾತಿನ ಅರ್ಥವೇನು? ಈ ಬಗ್ಗೆ ತಪ್ಪು ಮಾಡಿದ ಅಧಿಕಾರಿಗಳಿಗೆ ಪೌರಯುಕ್ತರ ಮುಂದೆ ಪ್ರಶ್ನೆ ಮಾಡಿದರೆ ನಾ ಏನು ಮಾಡ್ಲಿ ರೀ ಇದು ನನ್ನ ಕೆಲಸ ಅಲ್ಲ ಆದರೂ ನಾನು ನನಗೆ ತಿಳಿದಷ್ಟು ಮಾಡಿದ್ದೇನೆ ಎಂದು ಉತ್ತರಿಸುವ ಅಧಿಕಾರಿಗೆ ತಿಳಿದಿದ್ದಾದರೂ ಏನು? ಪೌರ ಕಾರ್ಮಿಕರ ಬದುಕಿನೊಂದಿಗೆ ಚಲ್ಲಾಟವಾದುತ್ತಿರುವ ಗದಗ ಬೆಟಗೇರಿ ನಗರಸಭೆಯ ದುರಾಡಳಿತ ಪೌರಾಡಳಿತ ನಿರ್ದೇಶನಾಲಯಕ್ಕೆ ಕಾಣುತ್ತಿಲ್ಲವೇ ಅಥವಾ ಜಾಣ ಕುರುದತನದ ನಾಟಕವಾದುತ್ತಿದೆಯೇ. ಎಂದು ಪೌರಾಡಳಿತ ಇಲಾಖೆ ಉತ್ತರಿಸಬೇಕಾಗಿದೆ
