ಗದಗ ಜಿಲ್ಲೆ.. ಪ್ರಕೃತಿ ಮಡಿಲಲ್ಲಿ ಇರುವ ಹಚ್ಹ ಹಸಿರಿನ ಪ್ರದೇಶ. ಕರ್ನಾಟಕದ ಹಿಮಾಲಯವೆಂದೇ ಖ್ಯಾತವಾದ ಕಪ್ಪತಗುಡ್ಡ ಇರುವ ಅತ್ಯಂತ ರಮಣೀಯ ತಾಣ, ಆಯುರ್ವೇದ ಗಿಡಮೂಲಿಕೆಗಳು ಹೇರಳವಾಗಿ ಸಿಗುವ ದೈವದತ್ತವಾದ ತಾಣ ಗದಗ ಜಿಲ್ಲೆ, ಕಪ್ಪತಗುಡ್ಡ ನುಂಗಿ ಹಾಕಲು ಕಳ್ಳರ ಸಂಚು ನಡೆದದ್ದು ಎಲ್ಲರಿಗೂ ಗೊತ್ತಿರುವ ವಿಚಾರ ಕಪ್ಪತಗುಡ್ಡ ಉಳಿಸಲು ಗದುಗಿನ ಲಿಂ. ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಗದುಗಿನ ಜನರನ್ನೆಲ್ಲ ಒಟ್ಟುಗೂಡಿಸಿಕೊಂಡು ನಡೆಸಿದ ಹೋರಾಟವೂ ಸಹ ನಿಮಗೆಲ್ಲ ಚಿರಪರಿಚಿತ. ಕೊನೆಗೆ ಕಪ್ಪತಗುಡ್ಡ ಸಂರಕ್ಷಿತ ಅರಣ್ಯ ಎಂದು ಘೋಷಣೆಯಾಯ್ತು, ಆದರೆ ಕಪ್ಪತಗುಡ್ಡ ಈಗ ಉಳಿದಿದೆಯಾ? ಕಪ್ಪತಗುಡ್ಡ ನಾಶ ಮಾಡಲು ಎಲ್ಲಾ ರೀತಿಯ ಪ್ರಯತ್ನಗಳು ನಡೆಯುತ್ತಲೇ ಇದೆ.. ಇದನ್ನೆಲ್ಲಾ ಸೂಕ್ಷ್ಮವಾಗಿ ನೋಡುವಾಗ ಕಪ್ಪತಗುದ್ದ ನುಂಗಲು ಹೊಂಚು ಹಾಕುತ್ತಿರುವ ಈ ಧಘಾಖೋರರೆನಾದರೂ ಸಂಚಿನಿಂದ ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳನ್ನು ಕೊಲೆ ಮಾಡಿಸಿದರಾ? ಎಂಬ ಸಂಶಯ ಬರುತ್ತದೆ ಈ ಪ್ರಶ್ನೆ ನಾನು ಎತ್ತಿದ್ದಲ್ಲ ಅವರು ಲಿಂಗೈಕ್ಯರಾದಾಗಲೇ ಗದುಗಿನಲ್ಲಿ ನಾನಾ ತರಹದ ಗುಸು ಗುಸು ಪಿಸು ಪಿಸು ಮಾತುಗಳು ನಡೆದದ್ದು ಎಲ್ಲರಿಗೂ ತಿಳಿದ ವಿಚಾರ ಈ ಬಗ್ಗೆ ತನಿಖಾ ಸಂಸ್ಥೆಗಳು ತನಿಖೆ ನಡೆಸುವುದು ಉತ್ತಮ.
ಗದಗ ಜಿಲ್ಲೆ ಎಂಬ ಪ್ರಕೃತಿಯ ಸೊಬಗಿನ ತುಂಬೆಲ್ಲ ಈಗ ನಮಗೆ ನೋಡಲು ಸಿಗುವುದೇ ಗಾಳಿ ವಿದ್ಯೋತ್ ಉತ್ಪಾಧನಾ ಯಂತ್ರಗಳು (ಕಂಬಗಳು) ಇದರಲ್ಲಿ 90% ತೊಂಬತ್ತು ಪ್ರತಿಶತ ಕಂಬಗಳು ಅನಧಿಕೃತವಾಗಿ ತಲೆ ಎತ್ತಿರುವುದು ವಿಪರ್ಯಾಸ ಮತ್ತೊಂದು ನೋವಿನ ಸಂಗತಿ ಏನಂದ್ರೆ ಗದುಗಿನ ತೊಂಬತ್ತು ಪ್ರತಿಶತ ಅಧಿಕಾರಿಗಳು ರಾಜಕಾರಣಿಗಳು ಈ ಗಾಳಿ ವಿದ್ಯೋತ್ ಲೂಟಿಖೋರರ ಸಂತೆಯ ಪೋಷಕರಾಗಿರುವುದು.
ಫಲವತ್ತಾದ ಭೂಮಿಯನ್ನು ನಾಶಮಾಡಲು ಕಳ್ಳರ ಜೊತೆ ಕೈಜೋಡಿಸಿದ ಸರಕಾರ ಕರ್ನಾಟಕ ಭೂಕಂದಾಯ ಕಾಯಿದೆಯ ಸೆಕ್ಷನ್ 95 ಅನ್ನು ತಿದ್ದುಪಡಿ ಮಾಡಿತು ಈ ರೀತಿಯಾಗಿ ರಿಯಲ್ ಎಸ್ಟೇಟ್ ಸೇರಿದಂತೆ ಕೃಷಿ ಭೂಮಿಯನ್ನು ಹಾಳು ಮಾಡುವ ಕಳ್ಳರ ಸಂತೆಗೆ ಸರಕಾರವೇ ಅಧಿಕೃತ ವಾರಸುದಾರ ಆದಂತಾಯ್ತು. ಮುಂದುವರೆದು ಗದಗ ಜಿಲ್ಲೆಯ ಗಾಳಿ ವಿದ್ಯೋತ್ ಕಳ್ಳರ ಜೊತೆ ಶಾಮೀಲಾಗಿರುವ ಕೆಲವು ಅಧಿಕಾರಿಗಳು ಗೊತ್ತಿದ್ದೂ ಗೊತ್ತಿಲ್ಲದಂತೆ ಜಾಣ ಕುರುಡರಾಗಿ ವರ್ತಿಸುತ್ತಿದ್ದಾರೆ.
ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ 95/2 ರಡಿ ಕೃಷಿ ಭೂಮಿಯನ್ನು ಕೃಷಿಯೇತರಕ್ಕೆ ಅಥವಾ ವಾಣಿಜ್ಯ ಉದ್ದೇಶಕ್ಕೆ ಎಂದು ಪರಿವರ್ತನೆಗೊಳಿಸದೆ ರಾಜಾರೋಷವಾಗಿ ಗದಗ ಜಿಲ್ಲೆಯ ತುಂಬೆಲ್ಲ ಗಾಳಿ ವಿದ್ಯೋತ್ ಸ್ಥಾವರಗಳು ತಲೆ ಎತ್ತಿದ್ದರೂ ಅಧಿಕಾರಿಗಳು ಕುರುಡರಾಗಿರುವುದು ವಿಶೇಷ.
ಗದಗ ಜಿಲ್ಲೆಯಲ್ಲಿ ವಿಂಡ್ ಫ್ಯಾನ್ ಗಳು ಸಾವಿರಾರು ಸಂಖ್ಯೆಯಲ್ಲಿದ್ದರೂ ಅದರ ಮಾಹಿತಿಯನ್ನೂ ಸಹ ಅಧಿಕಾರಿಗಳು ನೀಡುತ್ತಿಲ್ಲ ಗದಗ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಹಿಡಿದು ಗ್ರಾಮ ಪಂಚಾಯತ್ ಅಧಿಕಾರಿಗಳು ಶಾಮೀಲಾಗಿ ಮಾಡುತ್ತಿರುವ ಲೂಟಿ ಯೋಜನೆಯೇ ಈ ಗಾಳಿ ವಿದ್ಯೋತ್ ಕಂಬಗಳು.
ಗಾಳಿ ವಿದ್ಯೋತ್ ಸ್ತಾಪಿಸುವ ಕಂಪನಿಗಳು ರೈತರಂದ ನೇರ ಭೂಮಿ ಖರೀದಿ ಮಾಡದೇ ಮದ್ಯವರ್ತಿಗಳಿಂದ ಭೂಮಿ ಪಡೆದು ಸ್ಥಾವರ ಸ್ಥಾಪಿಸಿವೆ ಅಲ್ಲಿ ಇಲ್ಲಿ ತುಂಡು ಭೂಮಿಗಳನ್ನು ಪಡೆದು ಅವುಗಳಿಗೆ ಸಂಪರ್ಕ ಕಲ್ಪಿಸಲು ಬೇಕಾದ ರಸ್ತೆಗಳಿಗಾಗಿ ಉಳಿದ ಫಲವತ್ತಾದ ಭೂಮಿಯನ್ನು ನಾಶ ಮಾಡುವ ಈ ತಿಗಣಿ ಜಾತಿಯ ಕಳ್ಳರಿಗೆ ಕೈಕೋಳ ತೊಡಿಸುವವರಿಲ್ಲವೇ ಎಂದು ಜನರು ಮಾತನಾಡುವಂತಾಗಿದೆ
ಬಡ ರೈತರಿಗೆ ಅವರ ಜಮೀನಿನ ಚಿಕ್ಕ ಭಾಗಕ್ಕಾಗಿ ಲಕ್ಷಗಟ್ಟಲೆ ಹಣ ಕೊಡುವ ಆಮಿಷವನ್ನು ಕೆಲವು ದಲ್ಲಾಳಿಗಳ ಮೂಲಕ ನೀಡಿ ಅವರಿಂದ ಭೂಮಿ ಪಡೆದು ಅನಧಿಕೃತವಾಗಿ ಕೆಲವು ಅಧಿಕಾರಿಗಳ ಬೆಂಬಲದಿಂದ ಕಂಬಗಳನ್ನು ಸ್ಥಾಪಿಸಿ ನಂತರ ಆ ಇಡಿ ಭೂಮಿಯನ್ನೇ ಹಾಳು ಮಾಡುವ ಇಂತವರು ದೇಶಕ್ಕೆ ಮಾರಕ.
ಪವನ ವಿದ್ಯುತ್‌ಗೆ ಹೆಸರುವಾಸಿಯಾದ ಜಿಲ್ಲೆಯ ಕಪ್ಪತ್ತಗುಡ್ಡ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪವನ ವಿದ್ಯುತ್ ಉತ್ಪಾದನಾ ಕಂಪನಿಗಳು ಮುಗಿಬಿದ್ದು ಯಂತ್ರಗಳನ್ನು ಅಳವಡಿಸಿವೆ. ಆದರೆ, ವಿದ್ಯುತ್ ಯಂತ್ರ ಸ್ಥಾಪನೆ ವೇಳೆ ಸರ್ಕಾರದ ನಿಯಮಗಳನ್ನು
ಗಾಳಿಗೆ ತೂರಿರುವುದು ಬಹಿರಂಗಗೊಂಡಿದೆ. ಜಿಲ್ಲೆಯ ಗದಗ, ಶಿರಹಟ್ಟಿ, ಮುಂಡರಗಿ, ರೋಣ ಹಾಗೂ ನರಗುಂದ ತಾಲೂಕುಗಳ ವ್ಯಾಪ್ತಿಯಲ್ಲಿ ಅಂದಾಜು 393 ಪವನ ವಿದ್ಯುತ್ ಉತ್ಪಾದನಾ ಯಂತ್ರಗಳಿವೆ. ಅದರಲ್ಲಿ ಅಂದಾಜು 158 (ವಿವಿಧ ಕಂಪನಿಗಳಿಗೆ ಸೇರಿದ್ದು) ಪವನ ವಿದ್ಯುತ್ ಉತ್ಪಾದನಾ ಯಂತ್ರಗಳು ಎನ್‌ಎ ಮಾಡದೇ ಇರುವ ರೈತರ ಭೂಮಿಯಲ್ಲಿಯೇ ಕೃಷಿಯೇತರ ಚಟುವಟಿಕೆ ನಡೆಸುತ್ತಿವೆ. ಇನ್ನುಳಿದಂತೆ ಲೆಕ್ಕಕ್ಕೆ ಸಿಗದ ಲೆಕ್ಕ ಕೊಡದ ಸಾವಿರಾರು ಫ್ಯಾನಗಳನ್ನು ಇನ್ನೂ ಪತ್ತೆ ಹಚ್ಚಬೇಕಾಗಿದೆ. ಆಕ್ರಮ ಪವನ ವಿದ್ಯೋತ್ ಉತ್ಪಾಧನಾ ಕಂಪನಿಗಳಿಂದ ಕೆಲವು ಅಧಿಕಾರಿಗಳು ಸಾಕಷ್ಟು ಪ್ರಮಾಣದಲ್ಲಿ ಲಂಚವನ್ನು ಪಡೆದಿರುವ ಶಂಕೆ ಇದೆ, ರಾಜಾರೋಷವಾಗಿ ಈ ಕಂಪನಿಗಳು ಸ್ಥಾವರಗಳನ್ನೂ ಸ್ಥಾಪಿಸಿದರೂ ಇಷ್ಟು ವರ್ಷ ಯಾಕೆ ಸುಮ್ಮನೆ ಕುಳಿತಿದ್ದಾರೆ ಎಂದು ಆಲೋಚಿಸಲೇ ಬೇಕಾಗಿದೆ.
ವರದಿಯ ಪ್ರಕಾರ: ಎನಾರ್ಕಾನ್ 80, ಎನ್.ಸಿ.ಪಿ.ಸಿ 10, ಪಯೋನಿಯರ್ 11, ಟಾಟಾ ಪವರ್ 02, ಗ್ಲೋಬಲ್ ವಿಂಡ್ 26, ಬೆಳಗಾವಿ ವಿಂಡ್ ಪಾರ್ಮ್ 14, ದ್ರಾವಿಡ ಕಂಪನಿ 01, ಡಿ.ಎಲ್.ಎಫ್.ಕಂಪನಿ 14 ಒಟ್ಟು 158 ಫ್ಯಾನ್ ಗಳು ಅನಧಿಕೃತವಾಗಿ ಸ್ಥಾಪನೆಯಾಗಿರುವ ಬಗ್ಗೆ ವರದಿಯಾಗಿದೆ. ಈ ಕುರಿತು ನಾನು ಕರ್ನಾಟಕ ಭೂ ಕಂದಾಯ ನಿಯಮದ ಆಧಾರದಲ್ಲಿ 16-7-2013ರಂದು ಎಲ್ಲ 158 ಯಂತ್ರಗಳ ಕಂಪನಿಗಳಿಗೆ ನೋಟಿಸ್ ನೀಡಿ, ಒಂದು ವಾರದಲ್ಲಿ ಉತ್ತರಿಸಲು ಸೂಚಿಸಿತ್ತು ಆದರೆ ಮುಂದೇನಾಯ್ತು ಎಂಬುದು ನಿಘೂಡ.
ಗದಗ ಜಿಲ್ಲೆಯ ವಿಂಡ್ ಫ್ಯಾನಿನ ರೆಕ್ಕೆಯೊಂದು ಕತ್ತರಿಸಿ ಅಣತಿ ದೂರದಲ್ಲಿ ಬಿದ್ದಿರುವ ವಿಡಿಯೋ ಲಾಕ್ ಡೌನ್ ಸಮಯದಲ್ಲಿ ಪ್ರಸಾರವಾಯ್ತು ಆದರೆ ಅದು ಯಾವ ಕಾರಣಕ್ಕಾಗಿ ಕತ್ತರಿಸಿಕೊಂಡು ಬಿದ್ದಿತು ಯಾವ ಕಂಪನಿಯ ಫ್ಯಾನ್ ಇತ್ಯಾದಿ ವಿಷಯಗಳ ಬಗ್ಗೆ ಜನರಿಗೆ ಗೊತ್ತಾಗಲೇ ಇಲ್ಲ ಸದರಿ ಪ್ರಕರಣ ಏನಾಯ್ತು ಎಂದು ಸಂಬಂದಿಸಿದ ಇಲಾಖೆಗಳು ಉತ್ತರಿಸಬೇಕಾಗಿದೆ.
ಗಾಳಿ ವಿದ್ಯುತ್ ಸ್ಥಾವರಗಳ ಬಗ್ಗೆ ಹೋರಾಟಗಾರರು ಮಾಹಿತಿ ಹಕ್ಕು ಕಾರ್ಯಕರ್ತರು ಕೇಳುವ ಮಾಹಿತಿಗಳಿಗೆ ಉತ್ತರಿಸದೆ ಅರ್ಜಿಗಳನ್ನು ಇಲಾಖೆಯಿಂದ ಇಲಾಖೆಗೆ ಹಸ್ತಾಂತರಿಸುವ ಅಧಿಕಾರಿಗಳ ವರ್ತನೆಯನ್ನು ನೋಡಿದಾಗ ಇಲ್ಲಿ ಏನೋ ಸಮಸ್ಯೆ ಇದೆ ಎಂದು ಖಡಾಖಂಡಿತವಾಗಿ ಹೇಳಬಹುದು.
ವಿಂಡ್ ಮಾಫಿಯಾದ ಕುರಿತು ಸಮಗ್ರ ಮಾಹಿತಿಯನ್ನು ಜನರ ಮುಂದೆ ಪಾರದರ್ಶಕವಾಗಿ ಸಂಬಂದಿಸಿದ ಇಲಾಖೆಗಳು ಬಿಂಬಿಸಬೇಕಾಗಿದೆ. ಇಲ್ಲಿ ಏನೋ ಸಮಸ್ಯೆ ಇದೆ ಎಂಬ ಜನರ ಸಂಶಯಕ್ಕೆ ಉತ್ತರಿಸುವುದು ಅತ್ಯಗತ್ಯವಾಗಿದೆ ಅಧಿಕೃತ ಅನಧಿಕೃತಗಳ ಕೃತ್ಯಗಳು ಜಗಜ್ಜಾಹಿರಾಗಬೇಕಾಗಿದೆ. ರೈತರ ಜಮೀನುಗಳು ಉಳಿಯುವುದು ಅತಿ ಅವಶ್ಯವಾಗಿದೆ ಎಂಬುದು ಮಾತ್ರ ಸಾವಿರಪಾಲು ಸತ್ಯ…… ವಿಂಡ್ ಮಾಫಿಯಾದ ವಿರುದ್ದ ಜಿಲ್ಲೆಯ ಹೋರಾಟಗಾರರು ಒಂದಾಗಿ ಹೋರಾಡುವುದು ಅತಿ ಅವಷ್ಯ…. ಕಪ್ಪತಗುಡ್ಡ ಉಳಿಸಿ ಅಭಿಯಾನ ಕೇವಲ ಡಾ. ತೋಂಟದಾರ್ಯ ಸಿದ್ದಲಿಂಗ ಮಹಾಸ್ವಾಮಿಗಳ ವ್ಯಾಪ್ತಿಗೆ ನಿಂತುಹೋಗದೆ ಗದಗ ಜಿಲ್ಲೆಯ ಪರಿಸರ ಉಳಿಸಲು ಹೋರಾಟಗಾರರೆಲ್ಲ ಒಂದಾಗಿ ಹೋರಾಟ ಮಾಡಬೇಕಾಗಿದೆ ಎಂದು ಪತ್ರಿಕೆಯ ಆಶಯ
